ಹೊನ್ನಾವರ: ಕೃಷಿಯ ಬಗ್ಗೆ ಹೆಚ್ಚಿನ ಒಲುವು ಮೂಡಿಸುವ ಜೊತೆ ಆಧುನಿಕ ಕೃಷಿ ಬಗ್ಗೆ ತರಬೇತಿ ಮೂಡಿಸುವ ಕಾರ್ಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನರ್ಬಾಡ್ ಸಂಸ್ಥೆಯೊಂದಿಗೆ ಕೈ ಜೋಡಿಸಿದೆ ಎಂದು ನರ್ಬಾಡ್ ಡಿ.ಡಿ.ಎಂ. ರಿಜೇಶ್ ಕೆ.ಎಸ್. ಹೇಳಿದರು.

ಅವರು ಪಟ್ಟಣದ ಕೆಳಗಿನಪಾಳ್ಯ ರಾಘವೇಂದ್ರ ಸೆಂಟ್ರಲ್ ಟ್ರಸ್ಟ ಸಭಾಭವನದಲ್ಲಿ ನಬಾರ್ಡ ಹಾಗೂ ಶ್ರೀಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆ ಹಮ್ಮಿಕೊಂಡ 7 ದಿನದ ಪ್ಲಾಟ್ ನರ್ಸರಿ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನದಲ್ಲಿ ಭತ್ತ ಬೇಸಾಯ ನಶಿಸುತ್ತಿರುವುದು ಕಳವಳಕಾರಿಯಾಗಿದ್ದು, ಇದರ ಬಗ್ಗೆ ಜಾಗೃತಿ ಮೂಡಿಸುವ ಜೊತೆ ನೂತನ ಕೃಷಿ ಪದ್ದತಿಯ ಬಗ್ಗೆ ತರಬೇತಿ ನೀಡಿ ಬ್ಯಾಂಕಿಂಗ್ ಕ್ಷೇತ್ರದ ಸಹಕಾರದ ಬಗ್ಗೆ ಮಾಹಿತಿ ನೀಡಲು ಈ ತರಬೇತಿ ಆಯೋಜಿಸಲಾಗಿದೆ. ಇತ್ತೀಚಿಗೆ ತರಬೇತಿ ನೀಡುವ ಸಂಸ್ಥೆ ಹೆಚ್ಚಿದೆ. ಆದರೆ ಇದು ಕೇವಲ ಕಾಟಾಚಾರದ ತರಬೇತಿಯಾಗಿರದೇ ಆಸಕ್ತ ರೈತ ತರಬೇತಿ ಆಗಿದೆ. 1 ವರ್ಷಗಳ ಕಾಲ ಪರಿಶೀಲನೆ ನಡೆಸಿ ಆಸಕ್ತಿಯನ್ನು ಹೆಚ್ಚಿಸಿ ಸಹಾಯ ಸಹಕಾರ ನೀಡುವುದಾಗಿದೆ. ಬ್ಯಾಕಿಂಗ್ ಕ್ಷೇತ್ರದ ಮಾಹಿತಿ, ಆಧುನಿಕ ಸಲಕರಣೆ, ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಲಿದ್ದು, ತರಬೇತಿಯ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಕೃಷಿ ಅಧಿಕಾರಿ ಲಕ್ಷ್ಮೀ ದಳವಾಹಿ ಮಾತನಾಡಿ ತಾಲೂಕಿನಲ್ಲಿ ತೋಟಗಾರಿಕಾ ಬೆಳೆ ಹೊರತಾಗಿ ಭತ್ತ ಹಾಗೂ ಶೇಂಗಾ ಪ್ರಮುಖ ಬೆಳೆಯಾಗಿ ಬೆಳೆಯುತ್ತಿದ್ದು, ಆದರೆ ಕಳೆದ 2 ವರ್ಷಧಿಂದ ಗಣನೀಯವಾಗಿ ಇಳಿಮುಖವಾಗುತ್ತಿದೆ. ಆಧುನಿಕ ಪದ್ದತಿ ಯಂತ್ರೋಪಕರಣಗಳ ಬಳಕೆ ಮಾಡಿಕೊಂಡು ಇಲಾಖೆಯ ಸೌಲಭ್ಯ ಪಡೆದು ಹೆಚ್ಚಿನ ಆದಾಯ ಪಡೆಯಬೇಕು. ಕೃಷಿ ಒಂದು ಉದ್ದಿಮೆಯ ರೀತಿಯಲ್ಲಿ ಬೆಳೆ ಬೆಳೆದಾಗ ಅಭಿವೃದ್ದಿ ಹೊಂದಲು ಸಾಧ್ಯ ಎಂದರು.

7 ದಿನಗಳ ತರಬೇತಿ ನಡೆಯಲಿದ್ದು, ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಭಟ್ಕಳ ತಾಲೂಕಿನ ಆಯ್ದ 30 ರೈತರು ತರಬೇತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಅಧ್ಯಕ್ಷತೆ ವಹಿಸಿದ್ದ ಯೋಜನೆಯ ಜಿಲ್ಲಾ ನಿರ್ದೆಶಕ ಶಂಕರ ಶೆಟ್ಟಿ ಮಾತನಾಡಿ ಕೃಷಿ ಹಾಗೂ ಕೃಷಿಯೇತರ ಬಗ್ಗೆ ಅರಿವು ಮೂಡಿಸುವ ಜೊತೆ ಸ್ವಉದ್ಯೋಗದಿಂದ ಸ್ವಾವಲಂಭಿ ಜೀವನ ನಡೆಸಬೇಕು ಎನ್ನುವ ಸದುದ್ದೇಶದಿಂದ ಇಂತಹ ತರಬೇತಿಯನ್ನು ಯೋಜನೆ ಹಮ್ಮಿಕೊಳ್ಳುತ್ತಿದೆ. ಭತ್ತ ನಾಟಿಯಲ್ಲಿ ಯಂತ್ರೋಪಕರಣ ಬಳಕೆಯಿಂದ ಎಕರೆ ಪ್ರದೇಶಕ್ಕೆ 12 ಸಾವಿರದೊಳಗೆ ನಾಟಿ ಕಾರ್ಯ ಮುಗಿಯಲಿದ್ದು, ಕೃಷಿ ಇಲಾಖೆ ಹಾಗೂ ಯೋಜನೆ ಜಂಟಿಯಾಗಿ ರಾಜ್ಯದ 164 ಭಾಗದಲ್ಲಿ ಯಂತ್ರೋಪಕರಣ ಮಳಿಗೆಯಲ್ಲಿ ರೈತರ ಯಂತ್ರೋಪಕರಣ ಬಾಡಿಗೆಯಲ್ಲಿ ನೀಡುತ್ತಿದೆ. ಕೋರೋನಾ ಸಂಕಷ್ಟದ ಸಮಯದಲ್ಲಿ ಕಳೆದ ಬಾರಿ 500 ಎಕರೆ ಜಾಗದಲ್ಲಿ ಯಂತ್ರಶ್ರೀ ನಾಟಿ ಮಾಡಲಾಗಿದೆ. ಇಂದಿನ ತರಬೇತಿಯಲ್ಲಿ ಬೀಜ, ಮಣ್ಣಿನ ಆಯ್ಕೆ
ನೀರಿನ ವ್ಯವಸ್ಥೆ, ಮಾರುಕಟ್ಟೆ, ಬ್ಯಾಂಕಿನಿಂದ ಸೌಲಭ್ಯಗಳ ಬಗ್ಗೆ ವಿಸ್ರ್ತೀತ ಮಾಹಿತಿ ನೀಡಲಾಗುವುದು. ಅಲ್ಲದೇ ಯೋಜನೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡುತ್ತೀದ್ದು, ನಶಿಸುತ್ತಿರುವ ಭತ್ತ ಬೆಳೆಯನ್ನು ಮುಂದಿನ ದಿನದಲ್ಲಿ ಹೆಚ್ಚಿಸುವ ಕಾರ್ಯ ನಾವೆಲ್ಲರೂ ಸೇರಿ ಮಾಡೋಣ ಎಂದರು.
ವೇದಿಕೆಯಲ್ಲಿ ಎಸ್.ಬಿ.ಐ ಮ್ಯಾನೇಜರ್ ರಾಜಶೇಖರ ಹೊನ್ನಳ್ಳಿ, ಉಡುಪಿ ತರಬೇತಿ ಸಂಸ್ಥೆಯ ಪ್ರಾಚಾರ್ಯ ಅಶೋಕ ಕೆ. ಯೋಜನಾಧಿಕಾರಿ ಎಂ.ಎಸ್. ಈಶ್ವರ ಉಪಸ್ಥಿತರಿದ್ದರು. ಜ್ಞಾನವಿಕಾಸ ಸಮನ್ವಾಯಧಿಕಾರಿ ಯಮುನಾ ಸ್ವಾಗತಿಸಿ, ಎನ್.ಆರ್.ಎಂ.ಎಲ್ ರಜೀತ್ ವಂದಿಸಿದರು. ತರಬೇತಿ ಅಧಿಕಾರಿ ರಮೇಶ ಕಾರ್ಯಕ್ರಮ ನಿರ್ವಹಿಸಿದರು
Leave a Comment