ನೇತ್ರಾಣಿ ಸ್ಕೂಬಾ ಡೈವಿಂಗ್ ಮಾಲೀಕನ ಬಳಿ ಹಪ್ತಾ ಕೇಸ, ಬೆದರಿಕೆ ಪ್ರಕರಣ’
ಬಂಧನದ ಬಗ್ಗೆ ಪ್ರಮೋದ ಮುತಾಲಿಕ್ ಪ್ರತಿಕ್ರಿಯೆ
ಭಟ್ಕಳ:ಶ್ರೀ ರಾಮ ಸೇನೆ ರಾಜ್ಯ ಉಪಾಧ್ಯಕ್ಷ ಜಯಂತ ನಾಯ್ಕ’ ಮುರುಡೇಶ್ವರದಲ್ಲಿ ಕಳೆದ ತಿಂಗಳು ನೇತ್ರಾಣಿ ಸ್ಕೂಬಾ ಡೈವಿಂಗ ಮಾಲೀಕನ ಬಳಿ ಹಪ್ತಾ ವಸೂಲಿ ಕೇಳಿ ಕೊಡದಿದ್ದಲ್ಲಿ ಜೀವ ಬೆದರಿಕೆ ಹಾಕಿರುವ ಘಟನೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗುರುವಾರ ರಾತ್ರಿ ಆರೋಪಿಯನ್ನು ಬಂಧಿಸಿದ್ದಾರೆ.
ಮುರ್ಡೇಶ್ವರದ ನೇತ್ರಾಣಿ ಸ್ಕೂಬಾ ಡೈವಿಂಗ್ ನ ಮಾಲೀಕ ಗಣೇಶ ಹರಿಕಾಂತ ನೀಡಿದ ದೂರಿನ್ವಯ ಬಂದಿತ ಆರೋಪಿ ಶ್ರೀ ರಾಮ ಸೇನೆ ರಾಜ್ಯ ಉಪಾಧ್ಯಕ್ಷ ಜಯಂತ ಗೋಯ್ದ ನಾಯ್ಕ ಎಂದು ತಿಳಿದು ಬಂದಿದೆ.
ದೂರುದಾರ ಗಣೇಶ ಹರಿಕಾಂತ ಜನವರಿ 2 ರಂದು ಮುರುಡೇಶ್ವರದ ಸಮುದ್ರ ತೀರದಲ್ಲಿರುವದನ್ನು ಗಮನಿಸಿದ ಆರೋಪಿ ನೇರವಾಗಿ ದೂರುದಾರನ ಬಳಿ ಬಂದು ಅವಾಚ್ಯ ಶಬ್ದದಿಂದ ಬೈದ್ದು ನಿಂದಿಸಿ ಸ್ಕೂಬಾ ಡೈವಿಂಗ್ ಹಾಗೂ ಉತ್ತರ ಕನ್ನಡ ಸಿರಿ ಉತ್ಪನ್ನಗಳ ಅಂಗಡಿಯನ್ನು ನಡೆಸಬೇಕಾದರೆ ತಿಂಗಳಿಗೆ ಹಪ್ತಾ ನೀಡಬೇಕೆಂದು ಬೆದರಿಕೆಯೊಡಿದ್ದಾನೆ. ಒಂದು ವೇಳೆ ಹಣ ನೀಡದಿದ್ದಲ್ಲಿ ಅಂಗಡಿ ಹಾಗೂ ಸ್ಕೂಬಾ ಡೈವಿಂಗ್ ಮುಚ್ಚಿಸುವುದಾಗಿ ಬೆದರಿಸಿ ನಿನ್ನ ವಿರುದ್ದ ಜಿಲ್ಲಾಧಿಕಾರಿಗೆ, ಪೊಲೀಸ್ ಇಲಾಖೆಗೆ ಹಾಗೂ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿ ಮುಚ್ಚಿಸುತ್ತೇನೆಂದು ಹೇಳಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹಾಗೂ ಸ್ಕೂಬಾ ಡೈವಿಂಗಗೆ ತರಬೇತಿ ನೀಡುವ ತರಬೇತುದಾರರಿಗೂ ಜೀವ ಬೆದರಿಕೆ ಹಾಕಿದ ಕಾರಣ ಅವರು ಸಹ ಕೆಲಸಕ್ಕೆ ಬರುತ್ತಿಲ್ಲವಾಗಿದೆ. ಹಾಗೂ ಮುರುಡೇಶ್ವರಕ್ಕೆ ಬರುವ ಪ್ರವಾಸಿಗರಿಗೆ ಸ್ಕೂಬಾ ಡೈವಿಂಗ್ ಬಗ್ಗೆ ತಪ್ಪು ಮಾಹಿತಿ ನೀಡಿ ಪ್ರವಾಸಿಗರು ಸ್ಕುಬಾ ಡೈವಿಂಗ್ ಬಾರದಂತೆ ಮಾಡಿ ಆರ್ಥಿಕವಾಗಿ ನಷ್ಟ ಅನುಭವಿಸುವಂತೆ ಆಗಿದೆ ಎಂದು ದೂರುದಾರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣವನ್ನು ಪಿಎಸ್ಐ ಸಿ.ಆರ್.ಪುಟ್ಟಸ್ವಾಮಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆದಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರದಂದು ರಾತ್ರಿ ಆರೋಪಿ ಜಯಂತ ನಾಯ್ಕ ನನ್ನು ಪೊಲೀಸರು ಬಂಧಿಸಿ ಕಾರವಾರದ ಕಾರಾಗ್ರಹಕ್ಕೆ ಕರೆದೊಯ್ಯಲಾಗಿದೆ ಎಂಬ ಬಗ್ಗೆ ಪೊಲೀಸರು ಮಾಹಿತಿ ತಿಳಿಸಿದ್ದಾರೆ.

ಬಂಧನದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಮೋದ್ ಮುತಾಲಿಕ್- ಶ್ರೀ ರಾಮ ಸೇನೆ ರಾಜ್ಯಾಧ್ಯಕ್ಷ ಪ್ರತಿಕ್ರಿಯೆ ನೀಡಿದ್ದು ಜಯಂತ ನಾಯ್ಕ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ ಹರಿಕಾಂತ ಕೆಲವೊಂದು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವ ಬಗ್ಗೆ ದಾಖಲೆ ಕಲೆ ಹಾಕಿದ್ದರು. ಈ ಬಗ್ಗೆ ದೂರು ಸಹ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಯಂತ ನಾಯ್ಕ ಅವರನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಈ ದೂರು ನೀಡಿದ ಅವರನ್ನು ಬಂಧಿಸಿದ್ದಾರೆ. ವ್ಯವಸ್ಥಿತವಾಗಿ ಜಯಂತ ನಾಯ್ಕ ಅವರನ್ನು ಹತ್ತಿಕ್ಕುವ ಕೆಲಸವಾಗಿದೆ. ಇನ್ನು ಎರಡು ದಿನದಲ್ಲಿ ಭಟ್ಕಳಕ್ಕೆ ಬರಲಿದ್ದು, ಗಣೇಶ ಹರಿಕಾಂತ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಅವರನ್ನು ಬಂಧಿಸುವಂತೆ ಒತ್ತಾಯಿಸಲಿದ್ದೇವೆ. ನಮ್ಮ ಬಳಿ ದಾಖಲೆ ಇದ್ದು, ಪೋಲಿಸರು ಗಣೇಶ ಹರಿಕಾಂತ ಅವರ ಬಳಿ ಹಣ ಪಡೆದು ಜಯಂತ ನಾಯ್ಕ ಅವರನ್ನು ಬಂಧಿಸಿದ್ದಾರೆ.’
Leave a Comment