ಧಾರವಾಡ :- ಭಾರತೀಯ ಜನತಾ ಪಕ್ಷದ ಧಾರವಾಡ ನಗರ 71ಯುವಮೋರ್ಚಾ ಘಟಕದ ವತಿಯಿಂದ ಹಿಂದೂ ಹೃದಯ ಸಾಮ್ರಾಟ್ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ನಿಮಿತ್ತ ಇಂದು ಧಾರವಾಡದ ಪ್ರಸಿದ್ಧ ಛತ್ರಪತಿ ಶಿವಾಜಿ ವೃತ್ತ ವನ್ನು ಯುವಮೋರ್ಚಾ ಅಧ್ಯಕ್ಷರಾದ ಶಕ್ತಿ ಹಿರೇಮಠ ಅವರ ನೇತೃತ್ವದಲ್ಲಿ ಸ್ವಚ್ಚ ಗೊಳಿಸಲಾಯಿತು.

ಯುವಧುರಿಣರಾದ ಸಂಕಲ್ಪ ಶೆಟ್ಟರ್ ಅವರು ಸ್ವಚ್ಚ ಭಾರತ ಅಭಿಯಾನದಲ್ಲಿ ಭಾಗವಹಿಸಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿಗೆ ಮಾಲಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ 71ರ ಮಂಡಳ ಅಧ್ಯಕ್ಷರಾದ ಸುನೀಲ ಮೋರೆ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ಕಿರಣ ಉಪ್ಪಾರ್ ಮಂಡಳ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ಕೋಟ್ಯಾನ್, ಹರೀಶ ಬಿಜಾಪುರ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷರಾದ ಶಂಕರ ಶೆಳಕೆ ಜಿಲ್ಲಾ ಕಾರ್ಯದರ್ಶಿಗಳಾದ ಸಿದ್ದು ಕಲ್ಯಾಣ ಶೆಟ್ಟಿ, ಮಂಜುನಾಥ ಭೋಸಲೆ ಮಂಡಳ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವಿನಾಯಕ ಗೊಂಧಳಿ,

ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾದ ಮಂಜುನಾಥ ಯರಗಟ್ಟಿ ಸ್ವಚ್ಚ ಭಾರತ ಜಿಲ್ಲಾ ಸಂಚಾಲಕರಾದ ವಿನೋದ್ ಸಹ ಸಂಚಾಲಕರಾದ ಪ್ರಕಾಶ್ ಇಂಗಳೆ, ಪಕ್ಷದ ಹಿರಿಯರಾದ ನಿಂಗಪ್ಪ ಸಪೂರಿ, ರವಿ ಯೆಂಡಿಗೆರಿ, ಮಂಜುನಾಥ ಮಾಳೆ ರಾಹುಲ್ ಅಷ್ಟಗಿ ಯುವಮೋರ್ಚಾ ಪ್ರಮುಖ ಪದಾಧಿಕಾರಿಗಳಾದ ರಾಘವೇಂದ್ರ ತುಪ್ಪದ, ಕಾರ್ತಿಕ ಪೂಜಾರ್, ಸಚಿನ ಚವಾಣ್, ಸೂರಂಜನ್ ಗೂಂಡೆ, ಶ್ರೀಕಾಂತ ಒಂಟಿ ಸಾಗರ್ ಜೋಶಿ, ರಾಜೇಶ್ ನಾಯ್ಕ್ , ರವಿ ಮಾಳಗಾರ್, ಗುರು ತಳವಾರ ರೋಹಿತ ಜಾಧವ ಕಾರ್ತಿಕ ಹೆಂಬಲಿ, ಸಿದ್ದು ದಳವಿ ತಾನಾಜಿ ರೋಖಡೆ, ರಾಹುಲ ಚಾಬುಕಾಸವಾರ, ಅಭಿಷೇಕ್ ಗಂಗನಗೌಡ, ಹಾಗೂ ಎಲ್ಲ ಯುವಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.


Leave a Comment