ಹೊನ್ನಾವರ; ಎಂ.ಪಿ.ಇ ಸೊಸೈಟಿಯ ಡಾ.ಎಂ.ಪಿ.ಕರ್ಕಿ ಇನಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಎಂಡ್ ರಿರ್ಸಚ್ ಇವರ ವತಿಯಿಂದ ಸೆಂಟ್ರಲ್ ಸ್ಕೂಲ್ ಹೊನ್ನಾವರದಲ್ಲಿ ಪ್ರಸಕ್ತ ವರ್ಷದ ನವೋದಯ ಪರೀಕ್ಷೆ ಬರೆಯುತ್ತಿರುವ ತಾಲೂಕಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ನುರಿತ ಶಿಕ್ಷಕರಿಂದ ತರಬೇತಿಯ ತರಗತಿಯನ್ನು ಹಮ್ಮಿಕೊಳ್ಳಲಾಗಿದೆ. ಒಂದು ತಿಂಗಳ ಅವಧಿಯ ತರಗತಿ ಇದಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಪ್ರಸಾದ ಎಸ್.ಹೆಗಡೆ (9482186661) ಇವರ ಬಳಿ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ತರಗತಿ ಪ್ರತಿ ಶನಿವಾರ ಮಧ್ಯಾಹ್ನ 2ರಿಂದ 4ಗಂಟೆಯವರೆಗೆ,ರವಿವಾರ 10ರಿಂದ 12ಗಂಟೆಯವರೆಗೆ ನಡೆಯಲಿದ್ದು, ತಾಲೂಕಿನ ವಿದ್ಯಾರ್ಥಿಗಳ ಇದರ ಸದುಪಯೋಗ ಪಡೆದುಕೊಳ್ಳಬಹುದು.
Leave a Comment