ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾಮ ಪಂಚಾಯತದ ಅಧ್ಯಕ್ಷೀಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕಯಾಗಿ ಅಧ್ಯಕ್ಷೀಯ ಗಾದಿ ಹಿಡಿದಿದ್ದ ರಜನಿ ನಾಯ್ಕ ಅವರು , ಅಧಿಕೃತವಾಗಿ ಶಾಸಕ ದಿನಕರ ಶೆಟ್ಟಿ ನಿವಾಸದಲ್ಲಿ ಬಿಜೆಪಿ ಪಕ್ಷ ಸೇರ್ಪಡೆ ಆಗಿದ್ದಾರೆ.

ಸೋಮವಾರ ಶಾಸಕರ ನಿವಾಸದಲ್ಲಿ ಹೊನ್ನಾವರ ತಾಲೂಕಾ ಆಧ್ಯಕ್ಷ ರಾಜೇಶ ಭಂಡಾರಿ, ಹೊನ್ನಾವರ ತಾಲೂಕಾ ಪ್ರಭಾರಿ ಮತ್ತು ಜಿಲ್ಲಾ ಕಾರ್ಯದರ್ಶಿ ಶಿವಾನಿ ಶಾಂತಾರಾಮ್, ಕುಮಟಾ ತಾಲೂಕಾ ಅಧ್ಯಕ್ಷ ಹೇಮಂತ ಗಾಂವಕರ, ಸಮ್ಮುಖದಲ್ಲಿ ನೂತನವಾಗಿ ಗ್ರಾಮ ಪಂಚಾಯತಿಗೆ ಸದಸ್ಯನಾಗಿ ಆಯ್ಕೆಯಾದ ನಾಗೇಶ ಗೌಡ ಬಿಜೆಪಿ ಸೇರ್ಪಡೆಗೊಂಡರು. ಶಾಸಕ ದಿನಕರ ಕೆ ಶೆಟ್ಟಿ ಮಾತನಾಡಿ ಹೊನ್ನಾವರ ತಾಲೂಕಿನ 8 ಗ್ರಾಮ ಪಂಚಾಯತಗಳಲ್ಲಿ ಈಗಾಗಲೇ ನಮ್ಮ ಪಕ್ಷದ ಕಾರ್ಯಕರ್ತರು ೬ ಪಂಚಾಯತಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ಎರಡು ಪಂಚಾಯತಿಯಲ್ಲಿ ಪಕ್ಷೇತರರು ಅಧ್ಯಕ್ಷರಾಗಿದ್ದರು. ಇದೀಗ ಸಾಲ್ಕೋಡ್ ಗ್ರಾಮ ಪಂಚಾಯತ ಅಧ್ಯಕ್ಷೆ ರಜನಿಯವರ ಪಕ್ಷ ಸೇರ್ಪಡೆಯೊಂದಿಗೆ ಇನ್ನೊಂದು ಪಂಚಾಯತ ಸೆರ್ಪಡೆ ಆದಂತಾಗಿದೆ. ಅವರ ಕುಟುಂಬದವರು ಮೂಲತಃ ಬಿಜೆಪಿಗರೇ ಆಗಿದ್ದರೂ ಕಾರಣಾಂತರದಿಂದ ಪಕ್ಷೇತರರಾಗಿ ಚುನಾವಣೆ ಎದುರಿಸಿ , ಗ್ರಾಮ ಪಂಚಾಯತದಲ್ಲಿ ಪಕ್ಷೇತರ ಅಧ್ಯಕ್ಷರಾಗಿ ಆಯ್ಕೆ ಆಗುವಂತಾಗಿತ್ತು. ಮುಂದಿನ ಅವರ ಅಧ್ಯಕ್ಷೀಯ ಅವಧಿಯಲ್ಲಿ ಸಾಲ್ಕೊಡ ಗ್ರಾಮದ ಸರ್ವತೊಮುಖ ಅಭಿವೃದ್ದಿಗೆ ಅನುಕೂಲವಾಗಲಿದೆ ಎಂದರು. ಅಧ್ಯಕ್ಷೆ ರಜನಿ ನಾಯ್ಕ ಅವರು ಮಾತನಾಡಿ ಶಾಸಕ ದಿನಕರ ಶೆಟ್ಟಿಯವರ ಸಹಕಾರದೊಂದಿಗೆ ಸಾಲ್ಕೋಡ ಗ್ರಾಮ ಪಂಚಾಯತದ ಅಭಿವೃದ್ದಿಗೆ ಸರ್ವ ಸದಸ್ಯರ ಸಹಕಾರದೊಂದಿಗೆ ಶ್ರಮಿಸುತ್ತೇನೆ ಮತ್ತು ನಾನು ಬಿಜೆಪಿ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸಲು ಪಕ್ಷದ ಕಾರ್ಯಕರ್ತರಿಗೆ ಗ್ರಾಮಸ್ಥರಿಗೆ ಅಭಿನಂದಿಸಿದರು.
Leave a Comment