ಹೊನ್ನಾವರ:ತಾಲೂಕಿನ ಚಂದಾವರ ಗ್ರಾಮದ ಹೋಮದಕುಳಿ ಶ್ರೀ ಮಹಾಸತಿ ದೇವಸ್ಥಾನ ಜಿರ್ಣೊದ್ದಾರ ಕಾರ್ಯಕ್ಕೆ ರಾಜ್ಯ ಸರ್ಕಾರ ಆರಾದನಾ ಯೋಜನೆಯಡಿ ಹಣ ಬಿಡುಗಡೆಯಾಗಿತ್ತು. ಆದರೆ ಶಾಸಕ ದಿನಕರ ಶೆಟ್ಟಿ ಸರ್ಕಾರದಿಂದ ಮಂಜೂರಾದ ೫೦ ಸಾವಿರ ಹಣದ ಚೆಕ್ ರಸ್ತೆ ಪಕ್ಕದಲ್ಲೆ ವಿತರಿಸುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.ಶಾಸಕರ ಕಾರ್ಯಲಯ ಅಥವಾ ತಾಲೂಕಿನ ಸರ್ಕಾರಿ ಕಛೇರಿ ಅಥವಾ ದೇವಸ್ಥಾನದಲ್ಲಿ ವಿತರಿಸಬೇಕಿದ್ದ ಚೆಕ್ ರಸ್ತೆಯ ಪಕ್ಕ ವಿತರಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಹಿಂದು ಸಂಪದ್ರಾಯ, ದೇವಾಲಯದ ಬಗ್ಗೆ ವಿಸ್ತ್ರಿತ ಭಾಷಣ ಮಾಡುವ ಬಿಜೆಪಿ ಪಕ್ಷದ ಶಾಸಕರೇ ಆಗಿರುವ ದಿನಕರ ಶೆಟ್ಟಿ ಈ ನಡೆ ಸ್ವಪಕ್ಷದವರಿಗೆ ಅತ್ತ ನುಂಗಲು ಆಗದೇ ಇತ್ತ ಉಗುಳಲು ಆಗದ ಸ್ಥಿತಿ ಎದುರಾಗಿದೆ. ಕಾಂಗ್ರೇಸ್ ಅಥವಾ ಜೆಡಿಎಸ್ ಪಕ್ಷದವರು ಈ ರೀತಿ ವರ್ತಿಸಿದ್ದರೆ ಹಿಂದೂವಿರೋಧಿ, ಸರ್ಕಾರದ ಸೌಲಭ್ಯ ಕಾಟಾಚಾರಕ್ಕೆ ಪಾಲಿಸಿದ್ದಾರೆ ಎಂದು ಬೊಬ್ಬೆ ಇಡುತ್ತಿದ್ದರು ಸಾಮಾಜಿಕ ಜಾಲತಾಣದಲ್ಲಿ ಅಬ್ಬರಿಸುತ್ತಿದ್ದರು ಎಂದು ವಿಪಕ್ಷದವರು ಶಾಸಕರ ನಡೆಯನ್ನು ಕಾಲೆಳಿದ್ದಾರೆ.
Leave a Comment