
ಹೊನ್ನಾವರ: ಸದಾ ಒಂದಿಲ್ಲೊAದು ವಿವಾದ ಮೈಮೇಲೆ ಎಳೆದುಕೊಳ್ಳುವಲ್ಲಿ ಮುಂಚೂಣಿಯಲ್ಲಿರುವ ಸಾಸಕ ದಿನಕರ ಶೆಟ್ಟಿ ಅತ್ತಿಗೆ(ಶಾರದಾ ಶೆಟ್ಟಿ)ಮೇಲೆ ಸಿಟ್ಟಿನಿಂದ ಮಂತ್ರಿಗಳ ಸಮ್ಮುಖದಲ್ಲಿ ಆಡಿದ ಮಾತು ಇದೀಗ ಜಾರಕಿಹೊಳಿ ವಿಡಿಯೋದಷ್ಟೆ ಸದ್ದು ಮಾಡುತ್ತಿದೆ. ಎಲ್ಲೆಡೆ ರಸ್ತೆ ಮಾಡಿದ್ದೇವೆ. ಆದರೆ ಎಲ್ಲಿಯೂ ನೂರರಷ್ಟು ರಸ್ತೆ ಮಾಡಿಲ್ಲ. ಎಲ್ಲವನ್ನೂ ಒಮ್ಮೆಲೇ ಮಾಡಿದ್ರೆ ಮುಂದಿನ ಚುನಾವಣೆ ಹೊತ್ತಿಗೆ ಜನ ನಮ್ಮನ್ನ ಮರೆತು ಬಿಡುತ್ತಾರೆ ಎಂದು ಶಾಸಕ ದಿನಕರ್ ಶೆಟ್ಟಿ ಬಾಯಿಂದ ಬಂದ ಅಣಿಮುತ್ತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಕ್ಷೇತ್ರದ ಮತದಾರರರಿಂದಲೂ ಆಕ್ರೋಶಕ್ಕೆ ಕಾರಣವಾಗಿದೆ.

ಹೊನ್ನಾವರ ಪಟ್ಟಣ ಹಾಗೂ ಮಾರ್ಗ ಮಧ್ಯದ ೯ ಗ್ರಾಮ ಪಂಚಾಯತ್ಗಳಿಗೆ ಶರಾವತಿ ನದಿ ಮೂಲದಿಂದ ನೀರು ಸರಬರಾಜು ಯೋಜನೆ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಭಾಷಣ ಮಾಡುವಾಗ ಒಂದೆರಡು ಮಾತು ಆಡುವದಲ್ಲೆ ಸುಸ್ತಾಗಿ ವೇದಿಕೆಯಲ್ಲಿದ್ದ ನೀರಿನ ಬಾಟಲಿ ನೀರು ಕುಡಿದ ಬಳಿಕ ಮಾತು ಮುಂದುವರೆಸಿ ಕ್ಷೇತ್ರದಲ್ಲಿ ಎಲ್ಲಿಯೂ ನೂರಕ್ಕೆ ನೂರರಷ್ಟು ರಸ್ತೆಯನ್ನು ಮಾಡಿಕೊಡುತ್ತೇನೆ ಎಂದು ನಾನು ಹೇಳಲ್ಲ. ಎಲ್ಲವನ್ನೂ ಒಮ್ಮೆಲೇ ಮಾಡಿದ್ರೆ ಜನ ನಮ್ಮನ್ನ ಮರೆತು ಬಿಡತ್ತಾರೆ. ರಸ್ತೆ ಆಗಿದೆ ಎಂದರೆ ಜನರು ಮುಂದಿನ ದಿನಗಳಲ್ಲಿ ಮತ ಹಾಕುತ್ತಾರೋ, ಇಲ್ಲವೋ ಎಂಬ ಬಗ್ಗೆ ಅನುಮಾನವೂ ಇದೆ. ಇದೇ ಕಾರಣಕ್ಕೆ ಶೇ.೭೫ರಷ್ಟು ರಸ್ತೆ ಕೆಲಸ ಮಾಡಿದ್ದೇನೆ. ಇನ್ನುಳಿದ ಶೇ.೨೫ರಷ್ಟು ಕೆಲಸವನ್ನ ಚುನಾವಣೆ ಬಂದಾಗ ಮಾಡುತ್ತೇನೆ ಎಂದು ಶಾಸಕ ದಿನಕರ್ ಶೆಟ್ಟಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹಾಗೂ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಎದುರೇ ಹೇಳಿರುವುದು ಸಚಿವದ್ವಯರಿಗು ಇರುಸು ಮುರುಸಾದಂತಾಗಿ ಮುಜುಗರ ಉಂಟು ಮಾಡಿತ್ತು.
ಕಳೆದ ಬಾರಿ ಸಿದ್ದರಾಮಯ್ಯನವರು ಚುನಾವಣೆ ಸಮಯದಲ್ಲಿ ಶಂಕುಸ್ಥಾಪನೆ ನಾಮಕಾವಸ್ಥೆಗೆ ಮಾಡಿ ಹೋಗಿದ್ದಾರೆ ಎಂದು ಬಿಜೆಪಿಯವರು ಈ ಹಿಂದೆ ನಡೆಸಿದ ವಾಕ್ಸಮರಕ್ಕೆ ಅದೇ ಪಕ್ಷದ ಶಾಸಕರ ಮಾತು ಇದೀಗ ತಿರುಗುಬಾಣವಾಗಿದೆ. ಚುನಾವಣಾ ಸಂದರ್ಭಕ್ಕೆ ಕೇವಲ ವೋಟಿಗಾಗಿ ಜನರನ್ನು ರಾಜಕೀಯ ದಾಳವಾಗಿ ಬಳೆಸಿಕೊಳ್ಳುವ ರೀತಿಯಲ್ಲಿ ಹೇಳಿಕೆ ನೀಡಿದ್ದು ಇದೀಗ ಚರ್ಚೆಗೆ ಕಾರಣವಾಗಿದೆ. “ಅರೆಬರೆ ಅಭಿವೃದ್ಧಿ ಮಾಡುವ ರಾಜಕಾರಣಿಗಳಿಂದ ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿ ನಿರೀಕ್ಷಿಸಲು ಹೇಗೆ ಸಾಧ್ಯ?.ಯಾರೋ ತಂದಹ ಯೋಜನೆಗೆ ಇನ್ಯಾರೋ ಚಾಲನೇ ನೀಡುವುದೊಂದೇ ನಿರೀಕ್ಷಿಸಲು ಸಾಧ್ಯ.” “ಮತದಾರರ ಮಂಗ ಮಾಡುವ ರಾಜಕಾರಣಿಗಳಿರುವ ತನಕ ಅಭಿವೃದ್ಧಿ ಶೂನ್ಯವೇ.” “ಅವರ ಹಣೇ ಬರಹವೇ ಅಟ್ಟು”ಎನ್ನುವ ಠೀಕೆ, ಟಿಪ್ಪಣಿ, ಚರ್ಚೆ ಸಾಮಾಜಿಕ ಜಾಲತಾಣ ಸೇರಿದಂತೆ ಕ್ಷೇತ್ರದಾದ್ಯಂತ ರಾಜಕೀಯ ವಲಯದಲ್ಲಿ ಹುಟ್ಟುಕೊಂಡಿದೆ.
ರಾಜ್ಯ ರಾಜಕಾರಣದಲ್ಲಿ ‘ಸಾಹುಕಾರ್ ಸಿಡಿ’ ಪ್ರದರ್ಶನಗೊಂಡು ಕಂಗೆಟ್ಟಿರುವ ಬಿಜೆಪಿಗೆ ಇತ್ತ ಜಿಲ್ಲೆಯಲ್ಲಿ ಬಹದ್ದೂರ್ ಶಾಸಕ ದಿನಕರ ಶೆಟ್ಟಿಯ ವಿವಾದಾತ್ಮಕ ಭಾಷಣ ಪ್ರದರ್ಶನಗೊಳ್ಳುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗಿಡಾಗಿದೆ. ಅತ್ತ ಸಚೀವರ ರಾಜಿನಾಮೆಯಿಂದ ಬಜಾವಾಗಿ ಇತ್ತ ಶಾಸಕರಿಗೆ ನೋಟಿಸ್ ನೀಡಿ ನುಣುಚಿಕೊಳ್ಳಲಿದೆ ಎಂದು ಪ್ರತಿಪಕ್ಷಗಳು ಬಿಜೆಪಿ ವಿರುದ್ದ ಮುಗಿ ಬಿದ್ದಿದ್ದಾರೆ.
Leave a Comment