ಹೊನ್ನಾವರ: ಶಿಕ್ಷಣ ಜೊತೆ ಕ್ರೀಡೆಯಲ್ಲಿ ತೊಡಗಿದಾಗ ದೈಹಿಕ ಹಾಗೂ ಮಾನಸಿಕವಾಗಿ ಸದೃಡವಾಗಲು ಸಾಧ್ಯ ಎಂದು ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ ಹೇಳಿದರು. ಅವರು ಪಟ್ಟಣದ ಎಸ್.ಡಿ.ಎಂ. ಒಳಾಂಗಣ ಕ್ರಿಡಾಂಗಣದಲ್ಲಿ ನೇಚರ್ ಸ್ಪೋಟ್ಸ ಅಕಾಡೆಮಿ ಆಯೋಜಿಸಿದ ತಾಲೂಕ ಮಟ್ಟದ ಬ್ಯಾಡಮಿಂಟನ್ ಪಂದ್ಯಾವಳಿಗೆ ಗಿಡಕ್ಕೆ ನೀರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯಲ್ಲಿ ವಿಶೇಷವಾಗಿರುವ ಈ ಕ್ರೀಡಾಂಗಣದಲ್ಲಿ ತರಬೇತಿ ಪಡೆದು ರಾಜ್ಯ ರಾಷ್ಟ್ರಮಟ್ಟದಲ್ಲಿ ಸಾಧನೆ ಮಡಿದ ಅನೇಕ ಕ್ರೀಡಾಪಟುಗಳಿದ್ದಾರೆ. ಶಿಕ್ಷಣ ಜೊತೆ ಕ್ರೀಡಾರಂಗದಲ್ಲಿಯು ಸಾಧನೆ ಮಾಡಲು ವಿಫಲ ಅವಕಾಶವಿದೆ. ಹಲವು ಕ್ರಿಡಾಪಟುಗಳಿಗೆ ತಮ್ಮಲ್ಲಿರುವ ಪ್ರತಿಭೆ ಹೊರಹಾಕಲು ಇಂತಹ ಸ್ಪರ್ಧೆ ನಿಜಕ್ಕು ಸಹಕಾರಿಯಾಗಿದೆ. ಈ ಸಂಘಟನೆ ಮುಂದಿನ ದಿನದಲ್ಲಿ ಇನ್ನಷ್ಟು ಸ್ಪರ್ಧೆ ಆಯೋಜಿಸುವ ಮೂಲಕ ರಾಷ್ಟ್ರ ಮಟ್ಟದಲ್ಲಿಯು ಹಿರಿಮೆಯನ್ನು ಹೆಚ್ಚಿಸಿಕೊಳ್ಳಲಿ ಎಂದು ಶುಭಹಾರೈಸಿದರು.
ವೈದ್ಯಾದಿಕಾರಿಗಳಾದ ಆಶಿಕ್ ಹೆಗ್ಡೆ ಮಾತನಾಡಿ ಮಾನಸಿಕ ಹಾಗೂ ದೈಹಿಕ ಸ್ಥಿರತೆಗೆ ಕ್ರಿಡೆ ಬಹುಪಯೋಗಿಯಾಗಿದೆ. ಮನುಷ್ಯ ಆರೊಗ್ಯದಿಂದರಲೂ ಕ್ರಿಡೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ನೇಚರ್ ಸಂಘಟನೆಯ ವಿವಿಧ ಸದಸ್ಯರು ಆ ಸಾಧನೆಯನ್ನು ಈಗಾಗಲೇ ಮಾಡಿದ್ದಾರೆ ಎಂದು ಪ್ರಶಂಸಿದರು.
ನೇಚರ್ ಸ್ಪೊಟ್ರ್ಸ ಅಕಾಡೆಮಿ ಅಧ್ಯಕ್ಷ ಸತ್ಯಜಾವಗಲ್ ಅಧ್ಯಕ್ಷತೆ ವಹಿಸಿದ್ದರು. ಎಂ.ಪಿ.ಇ ಸೊಸೈಟಿ ಕಾರ್ಯದರ್ಶಿ ಎಸ್.ಎಮ್.ಭಟ್, ಎಸ್.ಡಿ.ಎಂ.ಕಾಲೇಜಿನ ಪ್ರಾಚಾರ್ಯೆ ವಿಜಯಲಕ್ಷ್ಮಿ ನಾಯ್ಕ, ಗ್ರಾಮ ಪಂಚಾಯತ ಅಧ್ಯಕ್ಷ ವಿಘ್ನೇಶ್ವರ ಹೆಗಡೆ,ಮಾಜಿ ಜಿಲ್ಲಾಪಂಚಾಯತ ಸದಸ್ಯ ಸುಬ್ರಹ್ಮಣ್ಯ ಶಾಸ್ತ್ರಿ, ಜಂಟಿ ಕಾರ್ಯದರ್ಶಿ ವಿಕಾಸ್ ಎಸ್.ಆರ್, ಖಜಾಂಚಿ ಅಕ್ಷಯಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರ್.ಕೆ. ಮೇಸ್ತ ಸ್ವಾಗತಿಸಿ, ಕಿರಣಕುಮಾರ್ ವಂದಿಸಿದರು. ಸುಧಿಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪಂದ್ಯಾವಳಿ ಆರಂಭಗೊಂಡಿತು.
Leave a Comment