ಹೊನ್ನಾವರ ತಾಲೂಕಿನ ಖರ್ವಾ-ಯಲಗುಪ್ಪಾ ಸಮೀಪಚಾಲನೆಯಲ್ಲಿದ್ದ ಟಿಟಿ ವಾಹನದ ಟಯರ್ ಬ್ಲಾಸ್ಟ್ ಆದ ಪರಿಣಾಮ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾಗಿ ಪ್ರಯಾಣಿಕರು ಗಂಭೀರ ಸ್ವರೂಪದ ಗಾಯಗೊಂಡ ಘಟನೆ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಹೊನ್ನಾವರ ಮಾರ್ಗವಾಗಿ ಕುಮಟಾಕ್ಕೆ ತೆರಳುತ್ತಿದ್ದ ಟಿಟಿ ವಾಹನ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಪಲ್ಟಿಯಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಘಟನೆಗೆ ಪ್ರಮುಖ ಕಾರಣ ಟಿಟಿ ವಾಹನದ ಹಿಂಬದಿಯ ಟಯರ್ ಬ್ಲಾಸ್ಟ್ ಆಗಿದೆ ಎಂದು ತಿಳಿದು ಬಂದಿದೆ. ಟಿಟಿಯಲ್ಲಿದ್ದ ಪ್ರಯಾಣಿಕರೆಲ್ಲರು ಕುಮಟಾಕ್ಕೆ ಸಂಬಂಧಿಯೊರ್ವರ ಮನೆಗೆ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು ಎನ್ನುವ ಮಾಹಿತಿ ಲಭಿಸಿದೆ. ಟಿಟಿ ವಾಹನವು ಸರಿಸುಮಾರು ಐವತ್ತು ಪಿಟ್ ಹಿಂದೆಯೆ ಟಯರ್ ಬ್ಲಾಸ್ಟ್ ಆಗಿ ರಸ್ತೆಯಲ್ಲಿ ಚಲಿಸುತ್ತಿದ್ದ ಮಾರ್ಗದ ವಿರುದ್ದ ದಿಕ್ಕಿನಲ್ಲಿ ತಿರುಗಿ ಬಿದ್ದಿದೆ. 20ಕ್ಕು ಅಧಿಕ ಪ್ರಯಾಣಿಕರು ಟಿಟಿಯಲ್ಲಿದ್ದು ಘಟನೆಯಲ್ಲಿ ಹತ್ತಕ್ಕು ಹೆಚ್ಚು ಮಂದಿ ಪ್ರಯಾಣಿಕರಿಗೆ ಗಾಯನೋವಾಗಿದ್ದು ಇರ್ವರು ಗಂಭೀರ ಗಾಯಾಳುವಾಗಿರುವ ಮಾಹಿತಿ ಲಭಿಸಿದೆ. ಯಾವುದೇ ಪ್ರಾಣಹಾನಿಯಾದ ವರದಿಯಾಗಿಲ್ಲ.ಘಟನಾ ಸ್ಥಳಕ್ಕೆ ಪಿಎಸ್ಐ ಶಶಿಕುಮಾರ್ ಸಿ.ಆರ್, ಸಿಬ್ಬಂದಿ ವರ್ಗ ಭೇಟಿ ನೀಡಿ ಗಂಭೀರ ಗಾಯಾಳುಗಳನ್ನು ಹೊನ್ನಾವರ ತಾಲೂಕಾ ಆಸ್ಪತ್ರೆಗೆ ಹಾಗೂ ಪಟ್ಟಣದ ಎರಡು ಖಾಸಗಿ ಆಸ್ಪತ್ರೆಗೆ ದಾಖಲಿದ್ದಾರೆ. ವಾಹನ ಬಿದ್ದ ಹಿನ್ನಲೆ ಘಟನಾ ಸ್ಥಳದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿದ್ದು ಪೊಲೀಸರು ಸ್ಥಳದಲ್ಲೆ ಇದ್ದು ಸುಗಮ ಸಂಚಾರಕ್ಕೆ ಅನೂಕೂಲ ಮಾಡಿಕೊಟ್ಟರು.

Leave a Comment