ಹೊನ್ನಾವರ: ತಾಲೂಕಿಗೆ ಅತಿ ಅಗತ್ಯವಿರುವ ಅಂಬುಲೆನ್ಸ ಸೇವೆಯನ್ನು ತಜೀಂ ಸಂಸ್ಥೆ ನೀಡಿರುವುದು ಪ್ರಶಂಸನಾರ್ಹವಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಪಟ್ಟಣದ ಬಂದರ್ ರಸ್ತೆಯ ಪೋರ್ಟ ಇಲಾಖೆಯ ಮೈದಾನದಲ್ಲಿ ತಂಜಿಮ್ ಸೊಸೈಟಿ ವತಿಯಿಂದ ಅಂಬ್ಯುಲೆನ್ಸ್ ಸೇವೆ ಲೋಕಾರ್ಪಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಜಾತಿ ಧರ್ಮ ಭೇದವಿಲ್ಲದೆ ಮಾನವಿಯ ಮೌಲ್ಯವನ್ನು ಹೆಚ್ಚಿಸುವ ಕಾರ್ಯ ಇದಾಗಿದ್ದು ತಂಜಿಮ್ ಸಂಸ್ಥೆ ಅತ್ಯಂತ ಕಡು ಬಡವರಿಗೆ ಉಚಿತವಾಗಿ ಸೇವೆ ನೀಡಲು ಮುಂದಾಗಿರುದಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದಕ್ಕಿಂತ ಉತ್ತಮವಾದ ಕೆಲಸ ಇನ್ನೊಂದಿಲ್ಲ ಎಂದು ಸಂಸ್ಥೆ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಬುಲೆನ್ಸ ಸಂಸ್ಥೆಗೆ ವಕಿಲರು ಮತ್ತು ಕರ್ನಾಟಕ ಕೆ.ಎಮ್.ಡಿ.ಸಿ ಮಾಜಿ ಅಧ್ಯಕ್ಷರಾದ ಎಸ್.ಯು.ತಲಕಣಿಯವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಳಿಸಿದರು.
ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ ಕಿಣಿ ಮಾತನಾಡಿ ತಂಜಿಮ್ ಸಂಸ್ಥೆ ಬಡವರಿಗೆ ಉಚಿತ ಅಂಬುಲೆನ್ಸ ಕಾರ್ಯ ಆರಂಭಿಸಿರುವುದು ಉತ್ತಮ ಕಾರ್ಯ ಇದರ ಸೌಲಭ್ಯ ಪ್ರತಿಯೊಬ್ಬರಿಗು ಸಿಗುವಂತಾಗಲಿ. ಕರೋನಾ ವ್ಯಾಕ್ಸಿನ್ ತಾಲೂಕ, ಪ್ರಾಥಮಿಕ ಆರೊಗ್ಯ ಕೇಂದ್ರದಲ್ಲಿ ಲಭ್ಯವಿದೆ. ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
೪೦ ದಿನದ ಮಗುವನ್ನು ಹೃದಯ ಶಸ್ತç ಚಿಕಿತ್ಸೆಗೆ ಕೇವಲ ನಾಲ್ಕೂ ಗಂಟೆಯಲ್ಲಿ ಮಂಗಳೂರಿನಿAದ ಬೆಂಗಳೂರಿಗೆ ತಲುಪಿಸಿದ ಮಂಗಳೂರಿನ ಅಂಬ್ಯುಲೈನ್ಸ್ ಚಾಲಕ ಮಹ್ಮದ ಹನಿಪ್ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವಿಕರಿಸಿ ಮಹ್ಮದ ಹನಿಪ್ ಮಾತನಾಡಿ ಪ್ರತಿ ಭಾಗದಲ್ಲಿಯೂ ಅಂಬುಲೆನ್ಸ ಇದೀಗ ಅತಿಅಗತ್ಯವಾಗಿದೆ. ತಾಲೂಕಿನ ಹುಟ್ಟಿದ ಮಗುವಿನಿಂದ ೧೦ ವರ್ಷದ ಒಳಗಿನ ಯಾವುದಾದರು ಮಗುವಿನ ಕಿಡ್ನಿ ಸಮಸ್ಯೆ ಹಾರ್ಟ ಸರ್ಜರಿ ಅವಶ್ಯವಿದ್ದಲ್ಲಿ ನನ್ನನ್ನು ಸಂಪರ್ಕಿಸಿದರೆ ಅತಿ ಕಡಿಮೆ ದರದಲ್ಲಿ ಆಗಲು ವ್ಯವಸ್ಥೆ ಕಲ್ಪಿಸುತ್ತೇನೆ. ಅಫಘಾತದಲ್ಲಿ ಒದ್ದಾಡುತ್ತಿದ್ದಾಗ ಸಾಧ್ಯವಾದಷ್ಟು ಸಹಕರಿಸಿ ಆಸ್ಪತ್ರೆಗೆ ಸೇರಿಸಲು ನೆರವಾಗುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ರೋಗ ಬಂದರೆ ಹೆದರಬೇಡಿ ಮರಣ ಬಂದಾಗ ಸಾವು ಸಂಭವಿಸುತ್ತದೆ. ರೋಗವಿಲ್ಲ ಎಂದು ಸಂತೋಷಪಡಬೇಡಿ ಮರಣಕ್ಕೆ ಯಾವುದೆ ರೋಗದ ಅವಶ್ಯಕತೆ ಇಲ್ಲ ಎಂದು ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ, ವಕೀಲರಾದ ವಿಕ್ರಮ ನಾಯ್ಕ, ಸಾಮಾಜಿಕ ಕಾರ್ಯಕರ್ತ ಡಾ ಇಸ್ಮಾಯಲ್ ತಲಕಣಿ, ಹುಸೇನ್ ಖಾದ್ರಿ, ಇನಾಮ್ ಘನಿ, ನವಾಜ ಶೇಖ, ನಸ್ರುಲಾ ಸಿದ್ದಿಕ್, ಉಪಸ್ಥಿತರಿದ್ದರು. ನಸರುಲ್ಲಾ ಸಿದ್ದಿ ಸ್ವಾಗತಿಸಿ ಸುಧೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
Leave a Comment