ಹಳಿಯಾಳ:- ಇತ್ತೀಚೆಗೆ ಜಮಖಂಡಿ ತಾಲೂಕ ಆಲಗೂರಿನಲ್ಲಿ ಹಾಗೂ ಗದಗಿನಲ್ಲಿ ನಡೆದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ಹಳಿಯಾಳ ಕ್ರೀಡಾ ವಸತಿ ನಿಲಯದ ಕುಸ್ತಿ ಪಟುಗಳು ಒಟ್ಟು 11 ಚಿನ್ನ 6 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಸಾಧನೆ ಮಾಡಿದ್ದಾರೆ.
ಈ ಹಿಂದೆಯೂ ಈ ಕುಸ್ತಿ ನಿಲಯದ ವಿದ್ಯಾರ್ಥಿ ಕುಸ್ತಿ ಪಟುಗಳು ರಾಜ್ಯ, ಅಂತರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದು ಇತ್ತೀಚೆಗೆ ನಡೆಯುತ್ತಿರುವ ಹಲವಾರು ಪಂದ್ಯಾವಳಿಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶನದ ಜೊತೆಗೆ ಪದಕಗಳ ಬೇಟೆಯಾಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.
ಜಮಖಂಡಿ ತಾಲೂಕ ಆಲಗೂರಿನಲ್ಲಿ ಹಾಗೂ ಗದಗಿನಲ್ಲಿ ನಡೆದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ತಾಲೂಕಿನ ವಿವಿಧ ಗ್ರಾಮಗಳ ವಿದ್ಯಾರ್ಥಿಗಳಾದ ಲಿನಾ ಅಂತೋನಿ ಸಿದ್ದಿ 60 ಕೆ ಜಿ ವಿಭಾಗದಲ್ಲಿ ಚಿನ್ನ ಮತ್ತು ಚೆನ್ನಮ್ಮ ಕೇಸರಿ ಬಿರುದು.
ಗೋಪಲಾ ಕೊಡಕಿ 46 ಕೆ ಜಿ ಭಾಗದಲ್ಲಿ ಚಿನ್ನ, ಗಾಯತ್ರಿ ಸುತಾರ 56 ಕೆ ಜಿ ವಿಭಾಗದಲ್ಲಿ ಬೆಳ್ಳಿ ಹಾಗೂ ಶಾಲಿನಾ ಸಿದ್ದಿ 50 ಕೆ ಜಿ ವಿಭಾಗದಲ್ಲಿ ಕಂಚು, ಪ್ರಿನ್ಸಿಟಾ ಸಿದ್ದಿ 60 ಹಾಗೂ 61 ಕೆ ಜಿ ವಿಭಾಗದಲ್ಲಿ ಚಿನ್ನ.
ಸುಜಾತಾ ಪಾಟೀಲ 60 ಕೆ ಜಿ ವಿಭಾಗದಲ್ಲಿ ಬೆಳ್ಳಿ, ಜ್ಯೋತಿ ಘಾಡಿ 46 ರಿಂದ 50 ಕೆ ಜಿ ಭಾಗದಲ್ಲಿ ಎರಡು ಬೆಳ್ಳಿ, ನಿಖಿತಾ ಡೇಪಿ 50 ರಿಂದ 53 ಕೆ ಜಿ ವಿಭಾಗದಲ್ಲಿ 2 ಬೆಳ್ಳಿ, ಸೊನಲ ಲಾಂಬೋರೆ 35 ಕೆ ಜಿ ವಿಭಾಗದಲ್ಲಿ ಬೆಳ್ಳಿ, ಜ್ಞಾನೇಶ್ವರ ಹಳದೂಳಕರ 46 ಕೆ ಜಿ ವಿಭಾಗದಲ್ಲಿ ಬೆಳ್ಳಿ ಪದಕಗಳನ್ನು ಬಾಚಿಕೊಳ್ಳುವ ಮೂಲಕ ಸಾಧನೆ ಮಾಡಿದ್ದಾರೆ.
ಹಳಿಯಾಳದ ಕ್ರೀಡಾ ವಸತಿ ನಿಲಯಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಣಾಧಿಕಾರಿ ಎಮ್ ಪ್ರಿಯಾಂಗ ಅವರು ವಿಜೇತ ಕುಸ್ತಿ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದರು.
Leave a Comment