ಭಟ್ಕಳ: ತೆರೆದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ವೃದ್ಧೆಯನ್ನುಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ತಾಲೂಕಿನ ಹುರುಳಿಸಾಲನಲ್ಲಿ ನಡೆದಿದೆ.

ಹುರುಳಿಸಾಲ್ ನಿವಾಸಿಯಾದ ಶಾರದಮ್ಮ (66) ತನ್ನ ಮನೆಯ ಪಕ್ಕದಲ್ಲಿರುವ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿಡಿದ್ದು. ತಕ್ಷಣ ವಿಷಯ ತಿಳಿದ ಮನೆಯವರು ಅಗ್ನಿ ಶಾಮಕ ದಳದವ ಕರೆ ಮಾಡಿದ್ದು ತಕ್ಷಣ ಕರೆಗೆ ಸ್ಪಂದಿಸಿ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ 10×35 ಆಳದ ಬಾವಿಗೆ ಇಳಿದು ಬಾವಿಯಲ್ಲಿ ಬಿದ್ದ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ .
ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ರಮೇಶ ಶೆಟ್ಟಿ , ಶಫಿ ಮಗಲ್, ಎನ್ ಪಟಗಾರ, ಶಿವಪ್ರಸಾದ ನಾಯ್ಕ, ಮಾರುತಿ ನಾಯ್ಕ, ಸಚಿನ ರಾಠೋಡ, ಚೇತನ ಪಾಟೀಲ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Leave a Comment