ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾಮದ ದರ್ಬೆಜಡ್ಡಿ ಸಮೀಪದ ಹೊಯ್ನಿರ್ ಸೇತುವೆ ಹಾಗೂ ಐಗರಮಕ್ಕಿ ಜನಸಾಲೆ ರಸ್ತೆ ನಿರ್ಮಾಣ ಕಾರ್ಯಕ್ಕೆ ಹಿಂದಿನ ಶಾಸಕರು ಚಾಲನೆ ನೀಡಿದರು, ಆರಂಭಗೊಂಡ 6 ತಿಂಗಳೊಳಗೆ ಕಾಮಗಾರಿ ಅರ್ಧಕ್ಕೆ ನಿಂತು ವರ್ಷಗಳೇ ಉರುಳಿತ್ತು. 4 ವರ್ಷದ ಬಳಿಕ ಶಾಸಕರಾದ ದಿನಕರ ಶೆಟ್ಟಿ ಬಳಿ ಗ್ರಾಮಸ್ಥರು ಮನವಿ ಮಾಡಿದರು ಮನವಿಗೆ ಸ್ಪಂದಿಸಿದ ಶಾಸಕರು ಅರಣ್ಯ ಇಲಾಖೆ ಸೇರಿದಂತೆ ಸಂಭದಿಸಿದ ಇಲಾಖೆಯ ಮೂಲಕ ಸಮಸ್ಯೆ ಬಗೆಹರಿಸಿ ಕಾಮಗಾರಿ ಆರಂಭಗೊಂಡಿತ್ತು.

ಶನಿವಾರ ಶಾಸಕರು ಸೇತುವೆಗೆ ಲೋಕಾರ್ಪಣೆ ಹಾಗೂ ರಸ್ತೆಗೆ ಗುದ್ದಲಿಪೂಜೆ ನಡೆಸಿದ ಬಳಿಕ ಮಾತನಾಡಿ
ನಾನು ಶಾಸಕನಾದ ಬಳಿಕ ಇಂತಹ ಹಲವು ಸಮಸ್ಯೆಗಳ ಬಗ್ಗೆ ಮೊದಲು ಆದ್ಯತೆ ನೀಡಿ ಬಗೆಹರಿಸುತ್ತಿದ್ದೇನೆ. ಅರಣ್ಯ ಇಲಾಖೆಯ ಅನುಮತಿ ಪಡೆದು ಈ ಸೇತುವೆ ನಿರ್ಮಾಣವಾಗಿದೆ.ಮುಂದಿನ ದಿನದಲ್ಲಿ ಮುಂದುವರೆದ ರಸ್ತೆ ಕಾಮಗಾರಿಯು ನಿರ್ಮಾಣಗೊಳ್ಳುದರಿಂದ ಈ ಭಾಗದವರಿಗೆ ಅನೂಕೂಲವಾಗಲಿದೆ. ಕುಮಟಾದಲ್ಲಿ 15 ರಿಂದ 20 ದಿನದೊಳಗೆ ಕೃಷಿ ಇಲಾಖೆಯ ಜಾಗವನ್ನು ಐಟಿಐ ಕಟ್ಟಡಕ್ಕೆ ಜಾಗ ಮಂಜೂರು ಮಾಡಿಸಿದ್ದೇನೆ. ಹೊನ್ನಾವರ ಪದವಿ ಕಾಲೇಜು ಕಟ್ಟಡ, ಪಟ್ಟಣ ಹಾಗೂ ಗ್ರಾಮೀಣ ಭಾಗದ ರಸ್ತೆ ಸೇತುವೆ ನಿರ್ಮಾಣ ಮಾಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ನಡೆಸುತ್ತಿದ್ದೇನೆ ಎಂದರು.

ಮುಂದೆ ಮತ್ತೆ ರಸ್ತೆ ಕಾಮಗಾರಿಗೆ ಚಾಲನೇ ನೀಡಲು ಬರುವ ಬದಲಿಗೆ ಇಂದೇ ರಸ್ತೆ ಕಾಮಗಾರಿಗೆ ಚಾಲನೇ ನೀಡಲಿದ್ದೇನೆ ಎಂದರು.
ಸೇತುವೆ ನಿರ್ಮಾಣವಾಗಲು ಕಾರಣಿಕರ್ತರಾದ ಶಾಸಕರನ್ನು ಸೇತುವೆ ನಿರ್ಮಾಣಕ್ಕೆ ಸ್ಥಳದಾನ ಮಾಡಿದ ರವಿ ಭಟ್ ದಂಪತಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಹಿಂದಿನ ಅವಧಿಯಲ್ಲಿ
ಗ್ರಾಮದ ಅರ್ಧಕ್ಕೆ ನಿಂತ ಸೇತುವೆ ಹಾಗೂ ರಸ್ತೆ ಕಾಮಗಾರಿಗಳನ್ನು ಆದಷ್ಟು ಬೇಗನೆ ಬಗೆಹರಿಸುವಂತೆ ಶಾಸಕರಿಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ರಜನಿ ನಾಯ್ಕ, ಜಿ.ಪಂ.ಸದಸ್ಯೆ ಶ್ರೀಕಲಾ ಶಾಸ್ತ್ರಿ, ಉಪಾಧ್ಯಕ್ಷ ಸಚೀನ ನಾಯ್ಕ, ಸದಸ್ಯರಾದ ಬಾಲಚಂದ್ರ ನಾಯ್ಕ,ಗಣಪತಿ ಭಟ್, ನಾಗೇಶ ಗೌಡ, ದೀಪಾ ನಾಯ್ಕ, ಗುತ್ತಿಗೆದಾರ ಎಸ್.ಕೆ.ನಾಯ್ಕ, ಇಲಾಖೆಯ ಅಧಿಕಾರಿಗಳಾದ ವೈ.ಎಚ್.ಇದ್ದಲಗಿ ಸೇರಿದಂತೆ ಅಧಿಕಾರಿಗಳು ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.
Leave a Comment