ಹೊನ್ನಾವರ: ತಾಲೂಕಿನ ಹಳದೀಪುರ ಗ್ರಾಮದ ಅಗ್ರಹಾರ ನವೀಲಗೋಣ ತಿರುವಿನ ಸಮೀಪದ ಕಿರಾಣೆ ಅಂಗಡಿಯೊಂದರ ಬೀಗ ಮುರಿದು ಕಳ್ಳರು ಕೈ ಚಳಕ ತೋರಿ ನಗದು ಹಣ ಹೊತ್ತೊಯ್ದ ಘಟನೆ ವರದಿಯಾಗಿದೆ.
ನಿತ್ಯಾನಂದ ಪೈ ಎನ್ನುವವರಿಗೆ ಸೇರಿದ ಕಿರಾಣಿ ಅಂಗಡಿಯ ಶಟರ್ ಅಳವಡಿಸಿದ ಬೀಗ ಮುರಿದು ಒಳ್ಳನುಗ್ಗಿದ ಕಳ್ಳರು 1.35 ಲಕ್ಷ ಹಣವನ್ನು ಕದ್ದೊಯ್ದಿದ್ದಾರೆ ಎಂದು ಹೊನ್ನಾವರ ಪೋಲಿಸ್ ಠಾಣಿಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಹೊನ್ನಾವರ ಪೋಲಿಸರು ತನಿಖೆ ಮುಂದುವರೆಸಿದ್ದಾರೆ.
Leave a Comment