ಭಟ್ಕಳ : ಹೊಸದಾಗಿ ನಿರ್ಮಿಸಿದ ಸುಸಜ್ಜಿತ ಮೀನು ಮಾರುಕಟ್ಟೆಯನ್ನು ಏಪ್ರಿಲ್ ರಿಂದ ಮೀನು ವ್ಯಾಪಾರ ಮಾಡಲು ಪ್ರಾರಂಭ ಮಾಡಲಾಗುತ್ತಿದೆ. ಹಾಲಿ ಇರುವ ಹಳೇ ಮೀನು ಮಾರುಕಟ್ಟೆಯನ್ನು ದಿನಾಂಕ: 31-03-2021 ರಿಂದ ಸ್ಥಗಿತಗೊಳಿಸಲಾಗುತ್ತದೆ ಎಂದು ಪುರಸಭೆ ಅಧ್ಯಕ್ಷ ಪರ್ವೇಜ್ ಕಾಶೀಂಜೀ ತಿಳಿಸಿದರು.
ಅವರು ಇಲ್ಲಿನ ಪುರಸಭೆ ಕಾರ್ಯಲಯದಲ್ಲಿ ಹಳೆ ಮೀನು ಮಾರುಕಟ್ಟೆ ಸ್ಥಳಾಂತರದ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

‘ಸಾರ್ವಜನಿಕರಲ್ಲಿ 25 ವರ್ಷದಿಂದ ಭಟ್ಕಳದಲ್ಲಿ ಒಂದು ಸುಸಜ್ಜಿತ ಮೀನು ಮಾರುಕಟ್ಟೆ ಆಗಬೇಕೆಂಬ ಬೇಡಿಕೆಯಿತ್ತು. ಅದರಂತೆ ಪುರಸಭೆಯೂ ಸತತ ಪ್ರಯತ್ನದಿಂದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಸುಸಜ್ಜಿತವಾಗಿ ನಿರ್ಮಾಣಗೊಳ್ಳುವಂತೆ ಮಾಡಲಾಗಿದೆ. ಕಳೆದ ಎರಡುವರೆ ವರ್ಷದ ಹಿಂದೆ ಹಿಂದಿನ ಸರಕಾರದ ಅವಧಿಯಲ್ಲಿ ಮಾಜಿ ಜಿಲ್ಲಾ ಉಸ್ತುವಾರಿ, ಕಂದಾಯ ಸಚಿವರಾಗಿದ್ದ ಆರ್.ವಿ. ದೇಶಪಾಂಡೆ ಹಾಗೂ ಮಾಜಿ ಶಾಸಕ ಮಂಕಾಳ ವೈದ್ಯ ಅವರ ಅವಧಿಯಲ್ಲಿ ಉದ್ಘಾಟನೆಗೊಳಿಸಿ ಮೀನು ವ್ಯಾಪಾರಿಗಳಿಗೆ ಗ್ರಾಹಕರಿಗೆ ಅನೂಕೂಲವಾಗಬೇಕೆಂದು ಸೂಚನೆ ಸಹ ನೀಡಲಾಗಿತ್ತು. ಆದರೆ ಕಾರಣಾಂತರದಿಂದ ಹಳೆ ಮೀನು ಮಾರುಕಟ್ಟೆಯಿಂದ ಮೀನು ವ್ಯಾಪಾರಿಗಳನ್ನು ಸುಸಜ್ಜಿತ ಮೀನು ಮಾರುಕಟ್ಟೆಗೆ ಸ್ಥಳಾಂತರಿಸಲು ಸಾಧ್ಯವಾಗಿಲ್ಲವಾಗಿತ್ತು ಎಂದರು.
ಒಟ್ಟು 1.38 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಮೀನು ಮಾರುಕಟ್ಟೆ ಅದೇ ರೀತಿ ಪುರಸಭೆ ನಿಧಿಯಿಂದ 6 ಲಕ್ಷ ಹಣವನ್ನು ಖರ್ಚು ಮಾಡಿದ್ದೇವೆ. ಜನರ ತೆರಿಗೆಯಲ್ಲಿ ಕಟ್ಟಿದ ಹಣವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿದೆ. ಸತತ ಎರಡೂವರೆ ವರ್ಷದಿಂದ ಹಳೆ ಮೀನು ಮಾರುಕಟ್ಟೆಯಲ್ಲಿನ ಮೀನು ವ್ಯಾಪಾರಿಗಳನ್ನು ಹೊಸ ಮೀನು ಮಾರುಕಟ್ಟೆಗೆ ಸ್ಥಳಾಂತರಿಸುವ ಸತತ ಪ್ರಯತ್ನವೂ ನಡೆಯುತ್ತಿತ್ತು. ಆದರೆ ಇದರಲ್ಲಿ ಎಲ್ಲರ ಸಹಕಾರವೂ ಇದಕ್ಕೆ ಅವಶ್ಯಕವಾಗಿದ್ದು, ಒಮ್ಮತದ ಒಪ್ಪಿಗೆ ಹಾಗೂ ಕೆಲ ಗೊಂದಲದಿಂದಾಗಿ ಸ್ಥಳಾಂತರಕ್ಕೆ ಸಮಸ್ಯೆಯಾಗಿತ್ತು. ಈ ನಿಟ್ಟಿನಲ್ಲಿ ಈಗ ಒಂದು ಅಂತಿಮ ನಿರ್ಧಾರ, ಸತತ ಚರ್ಚೆ ಅಭಿಪ್ರಾಯ ಪಡೆದು ಏಪ್ರಿಲ್ 1ರಂದು ಸುಸಜ್ಜಿತ ಹೊಸ ಮೀನು ಮಾರುಕಟ್ಟೆಗೆ ಎಲ್ಲಾ ವ್ಯಾಪಾರಿಗಳನ್ನು ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ ಎಂದರು.
ಸದ್ಯ ಭಟ್ಕಳ ಪುರಸಭೆ ಮಾಲಿಕತ್ವದ ಹಳೆ ಮೀನು ಮಾರುಕಟ್ಟೆಯನ್ನು ಮಾರ್ಚ್ 31ರಿಂದ ಬಂದ್ ಮಾಡಲಾಗುತ್ತಿದ್ದು ಕಾರಣ ಸಂಪೂರ್ಣ ಕಟ್ಟಡದ ಶಿಥಿಲಾವಸ್ಥೆಯಲ್ಲಿದ್ದು ಬೀಳುವ ಹಂತಕ್ಕೆ ಬಂದು ತಲುಪಿದೆ. ಸರ್ಕಾರಿ ಆಸ್ಪತ್ರೆ ರಸ್ತೆಯ ಸಂತೆ ಮಾರುಕಟ್ಟೆಯ ಒಳಗಡೆಯಲ್ಲಿ ಮಾಡಿದ ಹೊಸ ಮೀನು ಮಾರ್ಕೆಟಲ್ಲಿ ವ್ಯಾಪಾರ ನಡೆಸುವಂತೆ ಪುರಸಭೆಯೂ ಮೀನು ವ್ಯಾಪಾರಿಗಳಿಗೆ ಸೂಚಿಸಿದೆ. ಹಳೆ ಮೀನು ಮಾರುಕಟ್ಟೆಯಲ್ಲಿ ವ್ಯವಸ್ಥೆ ಸರಿಯಿಲ್ಲವಾಗಿದ್ದು ಜೊತೆಗೆ ತ್ಯಾಜ್ಯ ನೀರು ನಿಲ್ಲುತ್ತಿದ್ದು ಗ್ರಾಹಕರಿಗೆ, ಮೀನು ವ್ಯಾಪಾರಿಗಳಿಗೆ ಅನೂಕೂಲವಾಗಬೇಕೆಂದು ಈ ತೀರ್ಮಾನವನ್ನು ಪುರಸಭೆಯೂ ತೆಗೆದುಕೊಂಡಿದೆ ಎಂದರು. ಸುಸಜ್ಜಿತ ಮೀನು ಮಾರುಕಟ್ಟೆಯಲ್ಲಿ ಮೀನು ವ್ಯಾಪಾರಕ್ಕೆ ಎಲ್ಲಾ ವಿಧದ ವ್ಯವಸ್ಥೆ ಮಾಡಲಾಗಿದ್ದು, ಮೀನು ವ್ಯಾಪಾರಿಗಳಿಗೆ ಇನ್ನು ಯಾವುದಾದರು ವ್ಯವಸ್ಥೆ ಬೇಕಾಗಿದ್ದಲ್ಲಿ ಅದನ್ನು ಸಹ ಪುರಸಭೆಯಿಂದ ಮಾಡಲು ಸಿದ್ದರಿದ್ದೇವೆ ಇದಕ್ಕೆ ವ್ಯಾಪಾರಿಗಳು, ಸಾರ್ವಜನಿಕರು ಸ್ವಚ್ಛತೆಯ ಬಗ್ಗೆ ಗಮನ ಹರಿಸಿ ಸಹಕರಿಸಬೇಕು ಎಂದು ತಿಳಿಸಿದರು.
ಅವೈಜ್ಞಾನಿಕ ಬೇಡಿಕೆ ಈಡೇರಿಕೆ ಕಷ್ಟ:ಕೆಲವ ಮೀನು ವ್ಯಾಪಾರಿಗಳು ಅವೈಜ್ಞಾನಿಕ ರೀತಿಯ ಬೇಡಿಕೆಯಿಟ್ಟಿದ್ದು ಅದನ್ನು ಈಡೇರಿಸಲು ಅಸಾಧ್ಯ ಕಾರಣ ಬೀಳುವ ಹಂತದ ಕಟ್ಟಡದಲ್ಲಿಯ ಇರುತ್ತೇನೆಂದರೆ ಅವರಿಗೆ ಸಮಸ್ಯೆಯಾಗಲಿದೆ ಹೊರತು ಬೇರೆನು ಮಾರ್ಗವಿಲ್ಲ. ಸುಸಜ್ಜಿತ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವುದು ಅವರ ಜವಾಬ್ದಾರಿಯಾಗಿದ್ದು ಅದರಂತೆ ಅವರು ಪಾಲಿಸಿ ವ್ಯಾಪಾರ ಮಾಡಲೇಬೇಕಿದೆ ಎಂದು ಪುರಸಭೆ ಅಧ್ಯಕ್ಷ ಪರ್ವೇಜ್ ಕಾಶಿಮ್ಜಿ ತಿಳಿಸಿದರು.
ಹಳೆ ಮಾರುಕಟ್ಟೆಯನ್ನು ಪುನರ ನಿರ್ಮಾಣದ ಬಗ್ಗೆ ಚರ್ಚೆ: ಸದ್ಯ ಹಳೆ ಮಾರುಕಟ್ಟೆಯ ಜಾಗವನ್ನು ಪುರಸಭೆಯ ಮುಂದಿನ ಸಭೆಯಲ್ಲಿ ಸದಸ್ಯರೊಂದಿಗೆ ಚರ್ಚೆ ನಡೆಸಿ ಆಗು ಹೋಗುಗಳ ಬಗ್ಗೆ ಆಲೋಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಕಟ್ಟಡ ನಿರ್ಮಾಣವಾ, ಬೇರೆ ಮಾರುಕಟ್ಟೆ ನಿರ್ಮಾಣವಾ ಅಥವಾ ಜನರ ಬೇಡಿಕಗೆ ಅನುಗುಣವಾಗಿ ಶಿಥಿಲಾವಸ್ಥೆಯ ಕಟ್ಟಡವನ್ನು ಸದುಪಯೋಗಪಡಿಸಿಕೊಳ್ಳಲಿದ್ದೇವೆ ಎಂದು ಪುರಸಭೆ ಅಧ್ಯಕ್ಷ ಪರ್ವೇಜ್ ಕಾಶಿಮ್ಜಿಪುರಸಭೆ ಮುಖ್ಯಾಧಿಕಾರಿ ದೇವರಾಜು ಮಾತನಾಡಿದ್ದು ‘ಹಳೇ ಮಾರುಕಟ್ಟೆಯಲ್ಲಿರುವ ಮೀನು ವ್ಯಾಪಾರಸ್ಥರು ತಮ್ಮ ತಮ್ಮ ಇತರೇ ಸಾಮಾಗ್ರಿಗಳನ್ನು ಖುಲ್ಲಾಪಡಿಸಿ ಹೊಸದಾಗಿ ನಿರ್ಮಿಸಿದ ಆಸ್ಪತ್ರೆ ರಸ್ತೆಯಲ್ಲಿರುವ ಸುಸಜ್ಜಿತ ಮೀನು ಮಾರುಕಟ್ಟೆಗೆ ಸ್ಥಳಾಂತರಗೊಂಡು ತಮ್ಮ ತಮ್ಮ ವ್ಯಾಪಾರ ವಹಿವಾಟು ನಡೆಸಿಕೊಂಡು ಬರಲು ಅಂತಿಮ ಸೂಚನೆ ಮೂಲಕ ತಿಳಿಸಿದ್ದಾರೆ. ಮೀನು ಮಾರಾಟ ಮಾಡುವ ಮೀನು ವ್ಯಾಪಾರಸ್ಥರು ಪುರಸಭೆಯೊಂದಿಗೆ ಸಹಕರಿಸಬೇಕೆಂದು ತಿಳಿಸಿದರು.
ಈ ಸಂಧರ್ಬದಲ್ಲಿ ಪುರಸಭೆ ಉಪಾಧ್ಯಕ್ಷ ಕೈಸರ್ ಮೋಹತೇಶಾಮ ಉಪಸ್ಥಿತರಿದ್ದರು.
Leave a Comment