ಹೊನ್ನಾವರ: ತಾಲೂಕಿನ ಮಂಕಿಯ ವಿನುತಾ ಮಹಾಲೆ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ತೆರ್ಗಡೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ. ಪಟ್ಟಣದ ಪ್ರತಿಷ್ಟಿತ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದ ಇವರು ಸಿ.ಎ ಪರೀಕ್ಷೆ ತೆರ್ಗಡೆಯಾಗುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಮಂಕಿಯ ವಿನೋದ ಮಹಾಲೆ ಹಾಗೂ ಆಶಾ ಮಹಾಲೆ ದಂಪತಿಯ ಪುತ್ರಿಯಾಗಿದ್ದ ಇವರು ಕಡುಬಡತನದಲ್ಲೆ ಈ ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ಜನಪ್ರತಿನಿಧಿ ಅಧಿಕಾರಿಗಳು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
Leave a Comment