ಹೊನ್ನಾವರ: ಎಮ್.ಪಿ.ಇ ಸೊಸೈಟಿಯ ಡಾ.ಎಮ್.ಪಿ.ಕರ್ಕಿ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಆಂಡ್ ರಿಸರ್ಚ್ ಇದರ ಅಡಿಯಲ್ಲಿ ಎಮ್.ಪಿ.ಇ ಸೊಸೈಟಿಯ ಸಿಬಿಎಸ್ಇ ಶಾಲೆಯಲ್ಲಿ ನಡೆದ ನವೋದಯ ತರಬೇತಿ ತರಗತಿ ಸಂಪನ್ನಗೊಂಡಿತು.

ಕಳೆದ 6 ವಾರಗಳ ಕಾಲ ನಡೆದ ನವೋದಯ ತರಬೇತಿ ತರಗತಿ ಸಿಬಿಎಸ್ಇ ಶಾಲೆಯಲ್ಲಿ ಈ ಬಾರಿ ಇದೇ ಪ್ರಥಮ ಬಾರಿಗೆ ತಾಲೂಕಿನ ವಿದ್ಯಾರ್ಥಿಗಳಿಗೆ ಅನೂಕೂಲವಾಗಲೆಂದು ಕೊರೋನಾ ಮುಂಜಾಗೃತಾ ಕ್ರಮದ ಮೂಲಕ ತರಗತಿಯನ್ನು ನಡೆಸಲಾಗಿತ್ತು. ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಮ್.ಪಿ.ಇ ಸೊಸೈಟಿಯ ಉಪಾಧ್ಯಕ್ಷರಾದ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ ಜೀವನ ಪ್ರಾರಂಭವಾಗುವುದೇ ಹೋರಾಟದಿಂದ , ಒತ್ತಡ ಎಲ್ಲರಿಗೂ ಇರುತ್ತದೆ ಅದರಿಂದ ಹೊರಬಂದು ಜೀವನ ನಡೆಸಬೇಕು. ಅಲ್ಲದೆ ಹಳೆಯ ಶಿಕ್ಷಣ ಪದ್ಧತಿ ಹಾಗೂ ಈಗಿನ ಶಿಕ್ಷಣ ಪದ್ಧತಿಯ ವ್ಯತ್ಯಾಸವನ್ನು ಎತ್ತಿ ಹೇಳಿದರು. ಡಾ.ಎಮ್.ಪಿ.ಕರ್ಕಿ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಆಂಡ್ ರಿಸರ್ಚ್ ಇನ್ನಷ್ಟು ಹೊಸ ಹೊಸ ಕೋರ್ಸ್ಗಳ ತರಬೇತಿ ಆರಂಭಿಸುವ ಗುರಿಯನ್ನು ಹೊಂದಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ನೀಡುವಂತೆ ಕೋರಿದರು.
ಎಮ್.ಪಿ.ಇ ಸೊಸೈಟಿಯ ಕಾರ್ಯದರ್ಶಿ ಎಸ್.ಎಮ್.ಭಟ್ ಮಾತನಾಡಿ ಮುಂದಿನ ಶಿಕ್ಷಣಕ್ಕೆ ನವೋದಯ ತರಬೇತಿ ತರಗತಿ ನೆರವಾಗಲಿ. ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿ , ನಿಮ್ಮ ಪ್ರತಿಭೆಯನ್ನು ದೇಶಾದ್ಯಂತ ಗುರುತಿಸಿಕೊಂಡು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಸಿಬಿಎಸ್ಇ ಶಾಲೆಯ ಪ್ರಾಚಾರ್ಯೆ .ಕಾಂತಿ ಭಟ್ ಉಪಸ್ಥಿತರಿದ್ದರು. ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಆಂಡ್ ರಿಸರ್ಚ್ ಇದರ ಕೋ-ಆರ್ಡಿನೇಟರ್ ಪ್ರಸಾದ್ ಹೆಗಡೆ ಸ್ವಾಗತಿಸಿ, ಶಿಕ್ಷಕ ನಿತೇಶ ಶೇಟ್ ತರಗತಿಯ ಬಗ್ಗೆ ಅನಿಸಿಕೆ ಹಂಚಿಕೊಂಡರು. ಶಿಕ್ಷಕಿ ರಂಜಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Leave a Comment