ಹೊನ್ನಾವರ: ತಾಲೂಕಿನ ಮೇಲಿನ ಇಡಗುಂಜಿಗೆ ಆಯ್ಕೆಯಾದ ಸದಸ್ಯರು ಹಾಗೂ ಮಾಳ್ಕೋಡ್ ಗ್ರಾಮಸ್ಥರು ಮಾಳ್ಕೋಡ್ ಗ್ರಾಮದ ಬೋಳಕಟ್ಟೆಯ ಬಳಿ ಶ್ರಮದಾನ ನಡೆಸಿದರು. ಈ ಭಾಗದಲ್ಲಿ ರಸ್ತೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಬಹುದಿನಗಳಿಂದ ಬಿದ್ದಿರುವ ಪ್ಲಾಸ್ಟಿಕ್, ಮಧ್ಯದ ಬಾಟಲಿ ಸೇರಿದಂತೆ ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು.

ಅಲ್ಲದೇ ಈ ಭಾಗದಲ್ಲಿ ಸಂಜೆಯಾಗುತ್ತಲ್ಲೆ ಕೆಲ ಕಿಡಿಗೇಡಿಗಳು ಮಧ್ಯದ ಬಾಟಲಿ ಹಿಡಿದು ಕುಳಿತುಕೊಳ್ಳಲಿದ್ದಾರೆ. ಇದರಿಂದ ಈ ಭಾಗದಲ್ಲಿ ಸಂಚರಿಸಲು ಭಯಪಡುವ ಸ್ಥಿತಿನಿರ್ಮಾಣವಾಗಿದೆ. ಕೆಲ ಸಮಯ ಕಿಡಿಗೇಡಿಗಳು ಮಧ್ಯದ ಬಾಟಲಿ ಹೊಡೆದು ಹೋಗುತ್ತಾರೆ. ಇದರಿಂದ ಸಂಚಾರಕ್ಕೂ ಸಮಸ್ಯೆ ಆಗಲಿದೆ. ಗೋವುಗಳು ಈ ಭಾಗದಲ್ಲಿ ಸಂಚರಿಸುವಾಗ ಕಾಲಿಗೆ ಮಧ್ಯದ ಬಾಟಲಿಯ ಸೀಸ ಚುಚ್ಚಿ ಗಂಭೀರ ಗಾಯಗೊಂಡ ಘಟನೆಯು ಸಂಭವಿಸಿದೆ. ಇದರಿಂದ ಸ್ವಚ್ಚ ಮಾಡಿ ಸಂಭದಿಸಿದ ಪಂಚಾಯತಿ ಹಾಗೂ ಅರಣ್ಯ ಇಲಾಖೆ ಪೋಲಿಸ್ ಇಲಾಖೆ ಈ ಸ್ಥಳದ ಬಗ್ಗೆ ನಿಗಾ ವಹಿಸಿ ಕಸದ ರಾಶಿ ಬಿಸಾಡುದು ಮಧ್ಯ ಸೇವನೆ ಮಾಡುವವರ ಮೇಲೆ ಕಾನುನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಅಲ್ಲದೇ ಈ ಭಾಗದಲ್ಲಿ ಇಂತಹ ಘಟನೆ ನಡೆಯುವಾಗ ಸಾರ್ವಜನಿಕರು ಸಂಭದಿಸಿದ ಇಲಾಖೆ ಮಾಹಿತಿ ನೀಡುವಂತೆ ಗ್ರಾಮ ಪಂಚಾಯತಿ ಸದಸ್ಯ ಜ್ಞಾನೇಶ್ವರ ನಾಯ್ಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಮನೋಹರ ಡಯಾಸ್, ಜಿ.ಕೆ.ಹೆಗಡೆ, ಗೋಪಾಲ ನಾಯ್ಕ, ಮಹೇಶ ಹೆಗಡೆ ಮತ್ತಿತರ ಸಾರ್ವಜನಿಕರು ಉಪಸ್ಥಿತರಿದ್ದರು.
Leave a Comment