ಭಾರತದಲ್ಲಿ ಬ್ಯಾಂಕಿಂಗ್ ಸೇವೆಗಳು ಆನ್ಲೈನ್ ಆಗ್ತಿವೆ. ಇದೇ ಸಮಯದಲ್ಲಿ ಆನ್ಲೈನ್ ಮೋಸವೂ ವೇಗ ಪಡೆದಿದೆ. ಆನ್ಲೈನ್ ಸಲ್ಲಿ ಮೋಸ ಹೋದವರು ಸರಿಯಾದ ಸಮಯಕ್ಕೆ ಸರಿಯಾದ ವ್ಯಕ್ತಿಗೆ ದೂರು ನೀಡದೆ ತೊಂದರೆ ಅನುಭವಿಸುತ್ತಿದ್ದಾರೆ.

ಗೃಹ ಸಚಿವಾಲಯ ಮತ್ತು ದೆಹಲಿ ಪೊಲೀಸದ ಸೈಬರ್ ಸೆಲ್ 155260 ಸಂಬರ್ ಸಹಾಯವಾಣಿ ಪ್ರಾರಂಭಿಸಿದೆ.
ಆನ್ಲೈನ್ ವಂಚನೆಗೆ ಬಲಿಯಾಗಿದ್ದರೆ. ತಕ್ಷಣ ಈ ಸಂಖ್ಯೆಗೆ ಕೆರೆ ಮಾಡಬಹುದು. ಸಹಾಯವಾಣಿ ಆ ಬ್ಯಾಂಕ್ ಅಥವಾ ಇ-ಸೈಟ್ಗಳಿಗೆ ಎಚ್ಚರಿಕೆಯ ಸಂದೇಶವನ್ನು ಕಳುಹಿಸಿ. ನಿಮ್ಮ ಹಣ ಬೇರೆ ಖಾತೆಗೆ ತಲುಪದಂತೆ ತಡೆ ಹಿಡಿಯುತ್ತದೆ.
ಆನ್ಲೈನ್ ಮೋಸ ತಪ್ಪಿಸಲು ಗೃಹ ಸಚಿವಾಲಯ ಮತ್ತು ದೆಹಲಿ ಪೊಲೀಸರ ಸೈಬರ್ ಸೇಲ್ ಕೈಜೋಡಿಸಿವೆ. ಗೃಹ ಸಚಿವಾಲಯ ಮತ್ತು ದೆಹಲಿ ಪೊಲೀಸರ ಸೈಬರ್ ಸೆಲ್ ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಿದೆ. ಮೋಸ ಹೋದವರು ಈ ಸಹಾಯವಾಣಿಗೆ ಕರೆ ಮಾಡಿಸಹಾಯ ಕೇಳಬಹುದು.
ಸುಮಾರು 55 ಬ್ಯಾಂಕುಗಳು ಇ-ವ್ಯಾಲೆಟ್ಳು, ಇ-ಕಾಮರ್ಸ ಸೈಟ್ಗಳು, ಪಾವತಿ ಗೇಟ್ವೇಗಳು ಮತ್ತು ಇತರ ಸಂಸ್ಥೆಗಳು ಸಿಟಿಜನ್ ಪೈನಾನ್ಷಿಯಲ್ ಸೈಬರ್ ಪ್ರಾಢ್ ರಿಪೋರ್ಟಿಂಗ್ ಸಿಸ್ಟಲ್ ಎಂಬ ಸಂಪರ್ಕ ವೇದಿಕೆಯನ್ನು ಹೊಂದಿವೆ. ಈ ವೇದಿಕೆಯ ಮೂಲಕ ಆನ್ಲೈನ್ ಹಣಕಾಸು ವಂಚನೆಗಳಿಗೆ ಬಲಿಯಾದವರನ್ನು ಬಹಳ ಕಡಿಮೆ ಸಮಯದಲ್ಲಿ ರಕ್ಷಿಸಬಹುದು.
ಆನ್ಲೈನ್ ವಂಚನೆ ಘಡನೆಗಳನ್ನು ತಡೆಗಟ್ಟಲು ಗೃಹ ಸಚಿವಾಲಯದ ಸೈಬರ್ ಪೋರ್ಟಲ್
https://cybercrime.gov.in/Default.aspx ಮತ್ತು ದೆಹಲಿ ಪೊಲೀಸರ ಸೈಬರ್ ಸೆಲ್ 155260 ನಂಬರ್ ಕಳೆದ ನವೆಂಬರ್ ನಲ್ಲಿ ಪ್ರಾಯೋಗಿಕವಾಗಿ ಶುರುವಾಗಿತ್ತು. ಆದರೆ ಈಗ ಇದನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲಾಗಿದೆ.
Leave a Comment