ಭಟ್ಕಳ: ಮರುಡೇಶ್ವರದ ಕಾಯ್ಕಿಣಿಯ ಆರ್.ಎನ್.ಎಸ್. ಗಾಲ್ಫ್ ಹೊಟೆಲ್ ನ ಎದುರುಗಡೆಯ ಸಮುದ್ರದಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಶವ ಶನಿವಾರದ ಮಧ್ಯಾಹ್ನ ಪತ್ತೆಯಾಗಿದೆ.ಮೃತನು 35 ವರ್ಷ ಪ್ರಾಯದವನಿದ್ದು 5.5 ಎತ್ತರ ಹೊಂದಿದ್ದ ಕಪ್ಪು ಮೈ ಬಣ್ಣ ಹೊಂದಿದ್ದಾನೆ. ಈತನ ಎದೆಯ ಮೇಲೆ ಅಪ್ಪ ಅಮ್ಮ ಎಂಬ ಅಕ್ಷರದ ಅಚ್ಚು ಹಾಕಿಸಿಕೊಂಡಿದ್ದು ಎಡ ಕೈಯ ಮೇಲೂ ಅಚ್ಚು ಹಾಕಿಸಿಕೊಂಡಿದ್ದಾನೆ. . ಈತನ ಬಗ್ಗೆ ಯಾರಿಗಾದರೂ ತಿಳಿದಿದ್ದಲ್ಲಿ ಮುರುಡೇಶ್ವರ ಪೊಲೀಸ್ ಠಾಣೆ ದೂರವಾಣಿಗೆ ಕರೆ ಮಾಡಲು ಮುರುಡೇಶ್ವರ ಠಾಣಾ ಪಿ.ಎಸ್.ಐ. ರವೀಂದ್ರ ಬೀರಾದಾರ ತಿಳಿಸಿದ್ದಾರೆ.
Leave a Comment