ಹೊನ್ನಾವರ: ಕಡಲಾಮೆ ಮೊಟ್ಟೆ ಪತ್ತೆ ಆದ ಬಳಿಕ ಸಂರಕ್ಷಣೆ ಮಾಡಲು ಪಂಜರ ನಿರ್ಮಿಸಿದವರು ಸಮುದ್ರಕ್ಕೆ ಕಡಲಾಮೆ ಬಿಡಲು ಸಕಾಲಕ್ಕೆ ಬಾರದ ಹಿನ್ನಲೆಯಲ್ಲಿ ಹಲವು ಕಡಲಾಮೆ ಮರಿಗಳ ಪಂಜರದಲ್ಲೆ ಸಾವಪ್ಪಿದ ಘಟನೆ ಕರ್ಕಿ ಪಾವಿನಕುರ್ವಾ ಬಳಿ ಸಂಭವಿಸಿದೆ.

ಕೋಟಿ ಕೋಟಿ ಜೀವರಾಶಿಗಳನ್ನ ಸೃಷ್ಟಿಸಿದ ಭಗವಂತ ಪ್ರತಿ ಜೀವಿಗೂ ಬದುಕಿಗಾಗಿ ಅದರದ್ದೆ ಆದ ರೀತಿ ನಿಯಮಗಳನ್ನ ರೂಪಿಸಿದ್ದಾನೆ. ಅದರಂತೆ ಪ್ರತಿ ಜೀವಿಗೂ ಅದರದ್ದೇ ಆದ ಜೀವನ ಶೈಲಿಗಳಿವೆ ಆದರೆ ಮಾನವ ಮಾತ್ರ ಸೃಷ್ಟಿಯ ವ್ಯವಸ್ಥೆಯನ್ನೇ ಸಂರಕ್ಷಣೆ ಮಾಡುವ ಹೆಸರಿನಲ್ಲಿ ಸಂಹಾರಕ್ಕಿಳಿಯುವ ಸಾಕಷ್ಟು ಉದಾಹರಣೆಗಳಿವೆ. ಆದರೆ ಸಂರಕ್ಷಣೆ ಮಾಡಬೇಕಾದ ಅರಣ್ಯ ಇಲಾಖೆ ತನ್ನ ಜವಬ್ದಾರಿ ಮರೆತ ಪರಿಣಾಮ ಅನೇಕ ಕಡಲಾಮೆ ಧಾರುಣ ಸಾವು ಸಂಭವಿಸಿದ ಘಟನೆ ಕರ್ಕಿಯ ಬಸವದುರ್ಗ ಸಮೀಪ ಪಾವಿನಕುರ್ವಾ ಕಡಲತೀರದಲ್ಲಿ ಕಂಡು ಬಂದಿದೆ ಅರಣ್ಯ ಇಲಾಖೆಯವರು ಕಡಲಾಮೆಯ ಸಂರಕ್ಷಣೆಯ ಹೆಸರಿನಲ್ಲಿ ೧೦೦ ಕ್ಕೂ ಹೆಚ್ಚು ಕಡಲಾಮೆ ಮರಿಗಳ ಮಾರಣ ಹೊಮ ನಡೆಸಿದ್ದಾರೆ. ಅಳಿವಿನಂಚಿನಲ್ಲಿರುವ ಫೆಸಿಫಿಕ್ ರಿಟ್ಲೆಯಂತಹ ಕಡಲಾಮೆಗಳು ಸಮುದ್ರದ ಕಲ್ಮಶಗಳನ್ನು ಶುದ್ದಿ ಮಾಡುವ ಫಿಲ್ಟರ್ ಎಂದೇ ಕರೆಯಲಾಗುತ್ತದೆ ಈ ಆಮೆಗಳು ಭಾರತದ ಕರಾವಳಿ ಉದ್ದಕ್ಕೂ ಕಂಡುಬರುತ್ತವೆ. ಒರಿಸ್ಸಾ ಕಡಲ ಭಾಗದಲ್ಲಿ ಅತೀ ಹೆಚ್ಚು ಇದರ ಸಂತತಿ ಉಳಿದಿದೆ. ಆದರೇ ಕರ್ನಾಟಕದ ಕರಾವಳಿ ಭಾಗದಲ್ಲಿ ಇದರ ಸಂತತಿಯು ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದ್ದು, ಹೆಚ್ಚಾಗಿ ಸಮಶೀತೋಷ್ಣ ಬೆಳೆಯುತ್ತದೆ. ಸ್ಥಳೀಯ ಮೀನುಗಾರರ ಮಾಹಿತಿಯ ಮೇರೆಗೆ ಕಡಲಾಮೆ ಮೊಟ್ಟೆ ಇಟ್ಟ ಸ್ಥಳವನ್ನ ಗುರುತಿಸಿ ಅದಕ್ಕೆ ಪಂಜರ ನಿರ್ಮಿಸಿಅರಣ್ಯ ಇಲಾಖೆಯವರು ಹೊಗಿದ್ದಾರೆ.

ಆದರೆ ಮೊಟ್ಟೆ ಮರಿಯಾಗಿ ಬದುಕುವದಕ್ಕಾಗಿ ಹೋರಾಟ ಮಾಡುವಾಗ ಅರಣ್ಯ ಇಲಾಖೆಯವರು ಕರ್ತವ್ಯ ಮರೆತಿದ್ದಾರೆ. ಹಲವು ದಿನ ಕಾದರೂ ಅರಣ್ಯ ಇಲಾಖೆಯವರು ಯಾರೂ ಕೂಡಾ ಅತ್ತ ಸುಳಿಯದೆ ಇರುವುದನ್ನ ಗಮನಿಸಿದ ಸ್ಥಳೀಯರು ಮರಿಗಳು ಸಾಯುತ್ತಿರುವುದನ್ನ ಗಮನಿಸಿ ಕೆಲವು ಮರಿಗಳನ್ನ ಸಮುದ್ರಕ್ಕೆ ಬಿಟ್ಟಿದ್ದಾರೆ ಆದರೆ ನೂರಾರು ಮರಿಗಳು ಪಂಜರದಿAದ ಹೊರಬರಲಾರದೆ ಸಮುದ್ರ ಸೇರಲಾರದೆ ಪಂಜರದಲ್ಲೇ ಪ್ರಾಣ ಬಿಟ್ಟಿವೆ. ಬದುಕು ಕೊಡಲು ಸಾಧ್ಯವಿಲ್ಲದ ಅರಣ್ಯ ಇಲಾಖೆಗೆ ಸಾವು ಕೊಡುವ ಹಕ್ಕನ್ನ ಕೊಟ್ಟವರು ಯಾರು ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ. ಈ ಕುರಿತು ಸ್ಥಳೀಯರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿ ಅರಣ್ಯ ಇಲಾಖೆಯವರು ಕಡಲಾಮೆಮರಿಗಳಿಗೆ ಗೂಡನ್ನ ಕಟ್ಟಿ ಹೋದ ಮೇಲೆ ಈ ಕಡೆ ಬರದೆ ಹೋಗಿರುವುದರಿಂದ ೬೦ರಿಂದ ೭೦ ಕ್ಕೂ ಹೆಚ್ಚು ಮರಿಗಳು ಸಾವನ್ನಪ್ಪಿದೆ. ಬದುಕಿದ್ದ ೪ ರಿಂದ ೫ ಮರಿಗಳನ್ನ ಪರಿಸ್ಥಿತಿಯನ್ನ ನೋಡಲಾಗದೆ ಸಮುದ್ರಕ್ಕೆ ಬಿಟ್ಟಿದ್ದೇವೆ ಎಂದರು.ಸ್ಥಳೀಯರಾದ ಶಂಕರ ಎಸ್ ನಾಯ್ಕ , ಜಯರಾಮ,ಸುರೇಶ ಕಾರ್ವಿ ಕೃಷ್ಣ ಹರಿಕಾಂತ ಗಣೇಶ ಹರಿಕಾಂತ ಸ್ಥಳೀಯರು ಅಳಿದುಳಿದ ಕಡಲಾಮೆಯನ್ನು ಸಮುದ್ದಕ್ಕೆ ಬಿಡುವ ಮೂಲಕ ನೆರವಾಗಿದ್ದಾರೆ.

Leave a Comment