ನವದೆಹಲಿ : ಭಾರತೀಯ ನೌಕಾ ಪಡೆಯ ಅಧಿಕಾರಿಗಳು ಅರೇಬಿಯನ್ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದಾಗ ಮೀನು ಹಿಡಿಯುವ ದೋಣಿಯೊಂದರಿಗಂದ ಸುಮಾರು 3,000 ಕೋಟಿ ರೂ. ಬೆಲೆಯ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪರಿವೀಕ್ಷಣೆಯಲ್ಲಿದ್ದಾಗ ಅರಬ್ಬಿ ಸಮುದ್ರದಲ್ಲಿ ಅನುಮಾನಾಸ್ಪದ ಚಲನವಲನವನ್ನು ಪ್ರದರ್ಶಿಸುತ್ತಿದ್ದ ದೋಣಿಯೊಂದನ್ನು ಐಎನ್ಎಸ್ ಸುವರ್ಣ ಪತ್ತೆ ಹಚ್ಚಿತು. ನೌಕಾ ಪಡೆಯ ಸಿಬ್ಬಂದಿ ಅದನ್ನು ಪರಿಶೀಲನೆ ಮಾಡಿದಾಗ 300 ಕೆಜಿಗೂ ಹೆಚ್ಚು ಡ್ರಗ್ಸ್ ಸಿಕ್ಕಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 3,000 ಕೋಟಿ ರೂಪಾಯಿ ಇದೆ ಎಂದು ನೌಕಾ ಪಡೆಯ ಹೇಳಿಕೆ ನೀಡಿದೆ.
ಹೆಚ್ಚಿನ ತನಿಖೆಗಾಗಿ ದೋಣಿ ಮತ್ತು ಅದರ ಸಿಬ್ಬಂದಿಯನ್ನು ಕೊಚ್ಚಿಗೆ ಕರೆದೊಯ್ಯಲಾಗಿದೆ. ಈ ದೋಣಿಯ ಭಾರತಕ್ಕೆ ಸೇರಿದ್ದಲ್ಲ ಎಂದು ಮೂಲಗಳು ತಿಳಿಸಿವೆ.
ಇದು ಪ್ರಮಾಣ ಮತ್ತು ಬೆಲೆಯ ದೃಷ್ಟಿಯಿಂದ ಮಾತ್ರವಲ್ಲದೆ ಮಕ್ರಾನ್ ಕರಾವಳಿಯಿಂದ ಹೊರಹೊಮ್ಮುವ ಮತ್ತು ಭಾರತೀಯ ಮಾಲ್ಡೀವಿಯನ್ ಮತ್ತು ಶ್ರೀಲಂಕಾದತ್ತ ಸಾಗುವ ಅಕ್ರಮ ಮಾದಕವಸ್ತುಗಳ ಕಳ್ಳಸಾಗಣೆ ಮಾರ್ಗಗಳನ್ನು ಅಡ್ಡಿಪಡಿಸಿದೆ ದೃಷ್ಟಿಕೋನದಿಂದ ಕೂಡ ಒಂದು ಪ್ರಮುಖ ಕಾರ್ಯಾಚರಣೆಯಾಗಿದೆ, ಎಂದು ಅಧಿಕಾರಿಗಳು ಹೇಳಿದ್ದಾರೆ. (ಎಜೆನ್ನೀಸ್)
Leave a Comment