ಭಟ್ಕಳ : ತಾಲೂಕಿನ ಹಾಡುವಳ್ಳಿ ಪಂಚಾಯ್ತಿ ಕುರುಂದೂರು ಗ್ರಾಮದಲ್ಲಿ ತೋಟದಲ್ಲಿರುವ ಮರ ಕಡಿಯುವಾಗ ಮರದ ಟೊಂಗೆಯೊಂದು ಕೆಳಗಡೆ ಇದ್ದ ಮಹಿಳೆಗೆ ಬಡಿದ ಪರಿಣಾಮಗಾಯಗೊಂಡ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ ಘಟನೆ ನಡೆದಿದೆ.

ಕುರಂದೂರು ನಿವಾಸಿ ಲಕ್ಷ್ಮೀ ವೆಂಕಟೇಶ ನಾಯ್ಕ(೫೦) ಮೃತ ಮಹಿಳೆ ಎಂದು ತಿಳಿದು ಬಂದಿದೆ.ಮೃತಳ ಮಗ ತೋಟದಲ್ಲಿ ಇದ್ದ ಮರದ ಟೊಂಗೆಯನ್ನು ಕತ್ತಿಯಿಂದ ಕಡಿಯುತ್ತಿರುವಾಗ ಮರದ ಟೊಂಗೆ ಆಕಸ್ಮಿಕವಾಗಿ ಮುರಿದು ಮಹಿಳೆ ತಲೆಯ ಮೇಲೆ ಬಿದ್ದು ಗಂಭೀರ ಗಾಯಗೊಂಡು ಭಟ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವಾಗ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.ಈ ಬಗ್ಗೆ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment