ಹಳಿಯಾಳ:- ತಾಲೂಕಿನಲ್ಲಿ ಬುಧವಾರವು ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಒಂದೆ ದಿನ 83 ಜನರಲ್ಲಿ ಸೊಂಕು ಪತ್ತೆಯಾಗಿದ್ದು ತಾಲೂಕಿನಲ್ಲಿ ಸೊಂಕಿತರ ಸಂಖ್ಯೆ ದಿನೆ ದಿನೆ ಏರಿಕೆಯಾಗುತ್ತಾ ಸಾಗುತ್ತಿದೆ.
ಹಳಿಯಾಳ ತಾಲೂಕಾ ಕೊವಿಡ್ ವರದಿಯಲ್ಲಿ ತಿಳಿಸಿದಂತೆ ಬುಧವಾರ ೮೩ ಜನರಲ್ಲಿ ಸೊಂಕು ದೃಢಪಡುವ ಮೂಲಕ ತಾಲೂಕಿನ ಸಕ್ರಿಯ ಸೊಂಕಿತರ ಸಂಖ್ಯೆ ೩೪೮ಕ್ಕೆ ತಲುಪಿದೆ. ಇದರಲ್ಲಿ ಪಟ್ಟಣದಲ್ಲೇ 140 ಕ್ಕೂ ಹೆಚ್ಚು ಸೊಂಕಿತರಿದ್ದರೇ ೨೦೦ ಸೊಂಕಿತರು ಗ್ರಾಮಾಂತರ ಭಾಗದವರಿದ್ದಾರೆ.
ಸದ್ಯ ತಾಲೂಕಿನಲ್ಲಿ ೭ ಕಂಟೆನಮೆಂಟ್ ಝೋನಗಳಿದ್ದು ಪಟ್ಟಣದ ಗೌಳಿಗಲ್ಲಿ ಗ್ರಾಮಾಂತರ ಭಾಗದ ತಟ್ಟಿಹಳ್ಳ, ಮುರ್ಕವಾಡ, ಕೆರವಾಡ, ಭಾಗವತಿ, ನಂದಿಗದ್ದಾ ಮತ್ತು ಹವಗಿ ಗ್ರಾಮಗಳಲ್ಲಿ ತಾಲೂಕಾಡಳಿತದಿಂದ ಕಂಟೆನಮೆಂಟ್ ಝೋನಗಳನ್ನು ಗುರುತಿಸಲಾಗಿದೆ.
ಈವರೆಗೆ ತಾಲೂಕಿನಲ್ಲಿ ೩೧ ಜನ ಕೊರೊನಾಕ್ಕೆ ಉಸಿರು ಚೆಲ್ಲಿದ್ದಾರೆ. ಒಟ್ಟೂ ಪ್ರಕರಣಗಳ ಸಂಖ್ಯೆ ೧೨೭೮ ಕ್ಕೆ ಏರಿಕೆಯಾಗಿದ್ದರೇ ೮೯೯ ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
Leave a Comment