ಭಟ್ಕಳ : ತಾಲ್ಲೂಕಿನಲ್ಲಿರುವ ಕೋವಿಡ್ ಸೋಂಕಿತರ ಅನುಕೂಲಕ್ಕಾಗಿ ಭಟ್ಕಳ ಶಾಸಕ ಸುನೀಲ್ ಆಮ್ಲಜನಿಕ ಸಹಿತ ಉಚಿತ ಅಂಬುಲೇನ್ಸ್ ಸೇವೆಯನ್ನು ಪ್ರಾರಂಭಿಸಿದ್ದು, ರವಿವಾರ ತಾಲ್ಲೂಕಾಸ್ಪತ್ರೆಯಲ್ಲಿ ಅದರ ಉದ್ಘಾಟನೆಯನ್ನು ನೇರವೆರಿಸಿದರು. ನಂತರ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಹಲವು ಅಂಬುಲೇನ್ಸಗಳು ಕಾರ್ಯನಿರ್ವಹಿಸುತ್ತಿದೆ.

ಆದರೂ ತುತು ಸಂದರ್ಭದಲ್ಲಿ ಅಂಬುಲೇನ್ಸ ಲಭ್ಯವಾಗುವುದಿಲ್ಲ ಎನ್ನುವ ಸಾರ್ವಜನಿಕರ ದೂರಿನ ಮೇರೆಗೆ ನಾನು ನನ್ನ ಸ್ವಂತ ವೆಚ್ಚದಲ್ಲಿ ಈ ಅಂಬುಲೇನ್ಸ್ ಸೇವೆ ಪ್ರಾರಂಭಿಸಿದ್ದೇನೆ. ಈ ಸೇವೆ ಸಂಪೂರ್ಣ ಉಚಿತವಾಗಿದೆ. ತಾಲ್ಲೂಕಿನ ಕೋವಿಡ್ ಸೋಂಕಿತರು ಹಾಗೂ ಅವರ ಕುಟುಂಬದವರು ಆಸ್ಪತ್ರೆಗೆ ಹೋಗಿಬರಲು ಈ ಅಂಬುಲೇನ್ಸಿನ ಚಾಲಕರ ಮೊಬೈಲ ನಂಬರ 9741623913 ಗೆ ಕರೆ ಮಾಡಿ ಸಹಾಯ ಪಡೆಯಬಹುದು ಎಂದರು. ಕೇತ್ರದ ಜನರ ಆಶೀರ್ವಾದದಿಂದ ಗೆದ್ದು ಬಂದ ನಾನು ಜನರ ತುರ್ತು ಅಗತ್ಯಗಳಿಗೆ ಸ್ಪಂದಿಸಲು ದಿನದ 24 ಘಂಟೆಯೂ ಸಿದ್ದನಿದ್ದೇನೆ. ಜನರು ಯಾವುದೇ ಸಮಸ್ಯೆ ಬಂದಲ್ಲಿ ನನ್ನ ಹಾಗೂ ನನ್ನ ಆಪ್ತಸಹಾಯಕರಿಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು ಎಂದರು.

ತಾಲ್ಲೂಕಾಸ್ಪತ್ರೆಯ ವೈದ್ಯಾಧಿಕಾರಿ ಡಾ! ಸವಿತಾ ಕಾಮತ್ ಮಾತನಾಡಿ ಆಸ್ಪತ್ರೆಯ ಅಂಬುಲೇನ್ಸಗಳು ನಿರ್ದಿಷ್ಟ ಸೇವೆಗೆ ಮಾತ್ರ ಮೀಸಲಾದ ಕಾರಣ ಎಲ್ಲಾ ರೋಗಿಗಳಿಗೆ ಇದರ ಪ್ರಯೋಜನ ನೀಡಲು ಸಾಧ್ಯವಾಗುತ್ತೀರಲಿಲ್ಲ. ಶಾಸಕರು ನೀಡಿರುವ ಈ ಉಚಿತ ಅಂಬುಲೇನ್ಸ ವಾಹನ ಕೋವಿಡ್ ರೋಗಿಗಳಿಗೆ ಅನುಕೂಲವಾಗಲಿದೆ ಎಂದರು. ಬಿಜೆಪಿ ತಾಲೂಕಾಧ್ಯಕ್ಷ ಸುಬ್ರಾಯ ದೇವಾಡಿಗ, ಮಾಜಿ ಅಧ್ಯಕ್ಷ ನ್ಯಾಯವಾದಿ ರಾಜೇಶ ನಾಯ್ಕ, ಪ್ರಮೋದ ಜೋಶಿ, ಶ್ರೀಕಾಂತ ನಾಯ್ಕ, ಯುವ ಮೊರ್ಚ ಅಧ್ಯಕ್ಷ ಮಹೇಂದ್ರ ನಾಯ್ಕ, ನಿಸಾರ್ ಅಹ್ಮದ ಇದ್ದರು.
Leave a Comment