ಹೊನ್ನಾವರ; ತಾಲೂಕಿನ ಹೆರಂಗಡಿ ಪಂಚಾಯತಿ ವ್ಯಾಪ್ತಿಯ ಮೂಡ್ಕಣಿ ಭಾಗದ ರೈತರ ಮನೆ ಹಾಗೂ ಗದ್ದೆಯ ಸಮೀಪದ ಹೊಳೆಯ ಹೂಳೆತ್ತುವ ಮೂಲಕ ಮಳೆಗಾಲದಲ್ಲಿ ಸಂಭವಿಸುವ ನೆರೆ ಸಮಸ್ಯೆ ಶಾಸಕ ಸುನೀಲ ನಾಯ್ಕ ಬಗೆಹರಿಸಿದ್ದಾರೆ.

ದಶಕಗಳಿಂದ ಈ ಭಾಗದ ಸಾರ್ವಜನಿಕರಿಗೆ ಮಳೆಗಾಲದಲ್ಲಿ ಮನೆ ಹಾಗೂ ಗದ್ದೆಗಳಿಗೆ ಸಮೀಪದ ಹೊಳೆಯಿಂದ ನೀರು ನುಗ್ಗಿ ಸಮಸ್ಯೆ ಉಂಟಾಗಿತ್ತು. ಹಳ್ಳದ ಹೂಳೆತ್ತದೇ ಇರುವುದರಿಂದ ಗುಡ್ಡ ಹಾಗೂ ಪಕ್ಕದ ರಸ್ತೆಯ ಗಟಾರದ ನೀರು ಸರಾಗವಾಗಿ ಸಾಗದೇ ತಗ್ಗು ಪ್ರದೇಶಕ್ಕೆ ನುಗ್ಗುತ್ತಿತ್ತು. ಹಲವು ಬಾರಿ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಭರವಸೆ ನೀಡಿ ನುಣುಚಿಕೊಳ್ಳುತ್ತಿದ್ದರು.

ಕೆಲ ತಿಂಗಳ ಹಿಂದೆ ಇಲ್ಲಿಯ ಸಾರ್ವಜನಿಕರು ಶಾಸಕ ಸುನೀಲ ನಾಯ್ಕ ಬಳಿ ಸಮಸ್ಯೆ ಬಗ್ಗೆ ಮನವಿ ಮಾಡಿದ್ದರು. ಮನವಿ ಸಲ್ಲಿಸಿದ ದಿನವೇ ಭರವಸೆ ನೀಡಿದರೂ ಈಡೇರುವ ಆಶಾ ಭಾವನೆ ಸ್ಥಳಿಯರಿಗೆ ಇರಲಿಲ್ಲ. ಕೋವಿಡ್ ಮಹಾಮಾರಿಯಿಂದ ಲಾಕ್ ಡೌನ್ ಜಾರಿಯಾದ ಬಳಿಕ ಈ ಬಾರಿಯು ಈ ಸಮಸ್ಯೆ ಮುಂದುವರೆಯಲಿದೆ ಎಂದುಕೊಳ್ಳುತ್ತಿದ್ದರು. ಶಾಸಕರು ಇದೀಗ ೨ ಕಿಲೋಮೀಟರ್ ದೂರದ ಹಳ್ಳದ ಹೊಳೆತ್ತಲು ಹಣ ಬಿಡುಗಡೆ ಮಾಡಿದ್ದು ಮಾತ್ರವಲ್ಲದೇ ಕೆಲಸವನ್ನು ಆರಂಭಿಸಿರುವುದು ಬಹುವರ್ಷದ ಬೇಡಿಕೆಯನ್ನು ಈಡೇರಿಸಿದಂತಾಗಿದೆ. ೨ ಕಿ.ಮೀ ಹೊಳೆತ್ತಿರುದರಿಂದ ಈ ಬಾರಿ ನೀರು ನುಗ್ಗಿ ಆಗುವ ಅನಾಹುತ ತಪ್ಪುವ ಭರವಸೆ ಮೂಡಿರುದರಿಂದ ಶಾಸಕರಿಗೆ ಗ್ರಾಮಸ್ಥರು ಅಭಿನಂದಿಸಿದ್ದಾರೆ.

Leave a Comment