ಹೊನ್ನಾವರ: ತೌಕ್ತೆ ಚಂಡಮಾರುತದ ಪರಿಣಾಮದಿಂದ ತಾಲೂಕಿನ ಮಂಕಿ ಹಾಗೂ ಕಾಸರಕೋಡ್ ಭಾಗದ ಹಲವು ಮನೆಗಳಿಗೆ ಹಾನಿ ಸಂಭವಿಸಿತ್ತು. ಕಂದಾಯ ಇಲಾಖೆಯವರು ಸರ್ವೆ ಕಾರ್ಯ ನಡೆಸಿ ಹಾನಿಯ ಅಂದಾಜು ಪರಿಶೀಲನೆ ನಡೆಸಿದ್ದರು.

ಬುಧವಾರ ತಾಲೂಕ ಪಂಚಾಯತಿ ಸಭಾಭವನದಲ್ಲಿ ಶಾಸಕ ಸುನೀಲ ನಾಯ್ಕ ಹಾನಿ ಸಂಭವಿಸಿದ ೩೧ ಕುಟುಂಬಗಳಿಗೆ ಪರಿಹಾರ ಮೊತ್ತದ ಚೆಕ್ ಸರ್ಕಾರದಿಂದ ಮಂಜೂರಾಗಿದ್ದು, ಹಾನಿಗೊಳಗಾದ ಮನೆಗಳಿಗೆ ಪರಿಹಾರ ಧನದ ಪ್ರತಿಯನ್ನು ವಿತರಿಸದರು. 31 ಕುಟುಂಬಗಳಿಗೆ, ಒಟ್ಟೂ 8,80,400 ಲಕ್ಷ ರೂಪಾಯಿ ಮೊತ್ತವನ್ನು ಸಂತ್ರಸ್ತರ ಖಾತೆಗೆ ನೇರವಾಗಿ ಜಮೆ ಆಗಲಿದೆ. ಚೆಕ್ ಹಸ್ತಾಂತರಿಸಿದ ಬಳಿಕ ಶಾಸಕ ಸುನೀಲ ನಾಯ್ಕ ಮಾತನಾಡಿ ಕೊರೋನಾ ಸಂಕಷ್ಟದ ಸಮಯದಲ್ಲಿ ತೌಕ್ತೆ ಚಂಡಮಾರುತ ಎದುರಾಗಿದೆ.

ಕ್ಷೇತ್ರದ ಮಂಕಿ, ಕಾಸರಕೋಡ್, ಹೆರಂಗಡಿ ಖರ್ವಾ ಭಾಗದ ಮನೆಗಳಿಗೆ ಹಾನಿ ಸಂಭವಿಸಿತ್ತು. ಪ್ರಕೃತಿವಿಕೋಪ ಪರಿಹಾರದಡಿ ಹಣ ಬಿಡುಗಡೆಯಾಗಿ ಫಲಾನುಭವಿ ಖಾತೆಗೆ ಜಮಾ ಆಗಲಿದೆ. ಇನ್ನುಳಿದಂತೆ ರಸ್ತೆ ಮತ್ತು ತಡೆಗೋಡೆಗಳ ದುರಸ್ಥಿತಿಗೂ ನೀಲಿನಕ್ಷೆಯನ್ನು ಸಿಧ್ಧಪಡಿಸಲಾಗಿದೆ. ಕೆಲವೇ ದಿನಗಳಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ತಹಶೀಲ್ದಾರ ವಿವೇಕ ಶೇಣ್ವಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
Leave a Comment