ದಾಂಡೇಲಿ : ದಾಂಡೇಲಿ ನಗರದ ಕುಳಗಿ ರಸ್ತೆಯಲ್ಲಿ ಬೆಳ್ಳಂ ಬೆಳಗ್ಗೆ ದೂರದ ಗಾಂಧಿನಗರದಿಂದ ಕಾಲ್ನಡಿಗೆಯಲ್ಲಿ ಬಂದ ವಯೋವೃದ್ದೆÀ ಯಲ್ಲಮ್ಮ ದೈವಭಕ್ತೆ ಮಹಿಳೆಯೊಬ್ಬರು ಮನೆಯಲ್ಲಿ ವಿವಿಧ ಪೂಜಾ ಕಾರ್ಯಗಳನ್ನು ಮಾಡಿದ್ದ ಪ್ರಸಾದ ಹಾಗೂ ಇನ್ನಿತರ ವಸ್ತುಗಳನ್ನು ನದಿಗೆ ಅರ್ಪಿಸುವ ನಿಟ್ಟಿನಲ್ಲಿ ಬಂದಿದ್ದರು. ಆನಂತರದಲ್ಲಿ ಅಲ್ಲೆ ಇದ್ದ ಉದಯವಾಣಿ ಪತ್ರಿಕೆಯ ವರದಿಗಾರ ತನ್ನ ಬೈಕಲ್ಲಿ ಕೂಡಿಸಿ ಅವರ ಮನೆಯವರೆಗೆ ಬಿಟ್ಟು ಬಂದರು.

ವಯೋವೃದ್ದ ಮಹಿಳೆಯರಿಗೆ ಲಾಕ್ಡೌನ್ ಜಾರಿಯಿರುವುದರ ಬಗ್ಗೆ ಸರಿಯಾದ ಮಾಹಿತಿಯಿರದ ಹಿನ್ನಲೆಯಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿದೆ. ನಗರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಯಲ್ಲಮ್ಮನ ಭಕ್ತರಿದ್ದು, ಮನೆಯಲ್ಲಿ ಪೂಜೆ ಮಾಡಿದ ಬಳಿಕ ಪೂಜಾ ಪ್ರಸಾಧ ಮೊದಲಾದುವುಗಳನ್ನು ನದಿಗೆ ಬಿಡುವಂತಹ ಕಾರ್ಯಗಳನ್ನು ಸ್ವಲ್ಪ ದಿನ ಮುಂದೂಡುವುದು ಅಗತ್ಯವಾಗಿದ್ದು, ಅಂತಹ ಪೂಜಾಕತೃರ ಹತ್ತಿರದ ಮನೆಯವರು ವಯೋವೃದ್ದ ಮಹಿಳೆಯರಿಗೆ ಕೊರೊನಾ ಮತ್ತು ಲಾಕ್ಡೌನಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂಬ ಆಶಯ ವ್ಯಕ್ತವಾಗುತ್ತಿದೆ.

Leave a Comment