ನನ್ನ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಹಳಷ್ಟು ಜನರು ಸಣ್ಣ ಪ್ರಮಾಣದ ಕೋವಿಡ್ ರೀತಿಯ ಲಕ್ಷಣಗಳಿರುವರಿಗೆ (Covid like mild symtoms) ನುರಿತ ವೈದ್ಯಾಧಿಕಾರಿಗಳ ಸಲಹೆ ಪಡೆದು ಒಂದು ಔಷಧಿಯ ಕಿಟ್ ಹಾಗೂ ಸೇವನೆ ವಿಧಾನದ ಪಟ್ಟಿಯೊಂದಿಗೆ ವಯಕ್ತಿಕವಾಗಿ-ಉಚಿತವಾಗಿ ಕೊಡಲು ತೀರ್ಮಾನಿಸಿದ್ದೇನೆ.
ಆರೋಗ್ಯ ಇಲಾಖೆ/ ತಾಲ್ಲೂಕು ಆಡಳಿತ/ ಸ್ಥಳಿಯ ಪಂಚಾಯತ ಮಟ್ಟದ ಕೋವಿಡ್ ಕಾರ್ಯಪಡೆ ಹಾಗೂ ನಮ್ಮ ಪಕ್ಷದ ಕಾರ್ಯಕರ್ತರ ಮೂಲಕ ನೀಡಲಾಗುವುದು.
ನಿಮ್ಮ ಆರೋಗ್ಯ ಹಾಗೂ ಆಕ್ಸಿಜನ್ ಮೇಲೆ ಕಾಳಜಿಯಿರಲಿ, ರೋಗಲಕ್ಷಣಗಳು ಉಲ್ಬಣಗೊಂಡರೆ, ಆಕ್ಸಿಜನ್ ಪ್ರಮಾಣ 94 ಕ್ಕಿಂತ ಕಡಿಮೆಯಾದರೆ ಕೂಡಲೆ ಆಸ್ಪತ್ರೆ ಸಂಪರ್ಕಿಸಿ. ನಾವೆಲ್ಲ ಸೇರಿ ಕೋವಿಡ್ ಮಹಾಮಾರಿಯನ್ನು ಹೋಗಲಾಡಿಸಿ, ಆರೋಗ್ಯಯುತ ಜೀವನ ಸಾಗಿಸಬೇಕೆನ್ನುವುದು ಈ ಯೋಜನೆಯ ಉದ್ದೇಶ.
ಹೆಬ್ಬಾರ್ ಕೋವಿಡ್ ಹೆಲ್ಪಲೈನ್ ;8050749099,,8050767599
*ಶ್ರೀ ಶಿವರಾಮ ಹೆಬ್ಬಾರ್**ಕಾರ್ಮಿಕ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಉತ್ತರಕನ್ನಡ*
Leave a Comment