ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಉಂಟಾಗಿದ್ದು ಜಗಳದಲ್ಲಿ ಓರ್ವ ಸಾವುಕಂಡಿರುವ ಘಟನೆ ಇಂದು ಸಂಜೆ ಭದ್ರಾವತಿಯಲ್ಲಿ ನಡೆದಿದೆ.
ಇಂದು ಸಂಜೆ ಭದ್ರಾವತಿಯ ಅನ್ವರ್ ಕಾಲೋನಿ ನಿವಾಸಿ ಸಾಬೀಬ್ ಪಕ್ಕದ ಏರಿಯಾದ ಜೈಭೀಮ್ ನಗರಕ್ಕೆ ಬಂದಿದ್ದಾನೆ. ಸ್ನೇಹಿತರೊಂದಿಗೆ ಬಂದಿದ್ದ ಸಾದಿಕ್ ಗೆ ಜೈಭೀಮ್ ನಗರದ ಸುನೀಲ್ ಲಾಕ್ ಡೌನ್ ಇದೆ ಬರಬೇಡಿ ಎಂದು ಹೇಳಿದ್ದಾ
ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಉಂಟಾಗಿದ್ದು ಜಗಳದಲ್ಲಿ ಓರ್ವ ಸಾವುಕಂಡಿರುವ ಘಟನೆ ಇಂದು ಸಂಜೆ ಭದ್ರಾವತಿಯಲ್ಲಿ ನಡೆದಿದೆ.
ಇಂದು ಸಂಜೆ ಭದ್ರಾವತಿಯ ಅನ್ವರ್ ಕಾಲೋನಿ ನಿವಾಸಿ ಸಾಬೀಬ್ ಪಕ್ಕದ ಏರಿಯಾದ ಜೈಭೀಮ್ ನಗರಕ್ಕೆ ಬಂದಿದ್ದಾನೆ. ಸ್ನೇಹಿತರೊಂದಿಗೆ ಬಂದಿದ್ದ ಸಾದಿಕ್ ಗೆ ಜೈಭೀಮ್ ನಗರದ ಸುನೀಲ್ ಲಾಕ್ ಡೌನ್ ಇದೆ ಬರಬೇಡಿ ಎಂದು ಹೇಳಿದ್ದಾನೆ
ಈ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ತಕ್ಷಣವೇ ಸಾದಿಕ್ ತನ್ನ ಇತರೆ ಸ್ನೇಹಿತರೊಂದಿಗೆ ಬಂದು ಸುನೀಲ್ ಗೆ ಬೆನ್ನಿಗೆ ಎರಡುಬಾರಿ ಚೂರಿಯಿಂದ ಇರಿದ್ದಾನೆ.
ಸುನೀಲ್ ಜೊತೆ ಇದ್ದ ಶ್ರೀಕಂಠನಿಗೂ ಚಾಕು ಇರಿದ್ದಾನೆ ಆದರೆ ಶ್ರೀಕಂಠ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ. ಸುನೀಲ್ ಭದ್ರಾವತಿ ಪೌರ ಕಾರ್ಮಿಕನ ಮಗನಾಗಿದ್ದು ಆತನನ್ನ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು
ಆದರೆ ವೈದ್ಯರು ಶಿವಮೊಗ್ಗದ ಮೆಗ್ಗಾನ್ ಗೆ ತೆಗೆದುಕೊಂಡು ಹೋಗಿ ಎಂದು ಸೂಚಿಸಿದ ಮೇರೆಗೆ ಸುನೀಲ್ ನನ್ನ ಮೆಗ್ಗಾನ್ ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುನೀಲ್ ಕೊನೆ ಉಸಿರು ಎಳೆದಿದ್ದಾನೆ. ಹಳೇ ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೊರೋನ ಸಂಕಷ್ಟದ ಸಮಯದಲ್ಲಿ ಜನ ಆರೋಗ್ಯ ಕಳೆದುಕೊಳ್ಳುವಂತೆ ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಆದರೆ ಕೊಲೆ, ಸುಲಿಗೆ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿರುವುದು ಜನರನ್ನ ಆತಂಕಕ್ಕೆ ದಬ್ಬಿದೆ.
Leave a Comment