ಭಟ್ಕಳ: ದೂರದ ಪುಣೆಯಿಂದ ಹಸೆಮಣೆ ಏರಲು ಕೇರಳಕ್ಕೆ ಬೈಕನಲ್ಲಿ ಹೊರಟಿದ್ದ ಸೈನಿಕನೊರ್ವನನ್ನು ಭಟ್ಕಳದ ಪೊಲೀಸರು ತಡೆದು ತಪಾಸಣೆ ನಡೆಸಿದ್ದಾರೆ.
ಈ ಕೊರೊನಾ ಸೋಂಕು ದೇಶದ ಜನರಿಗೆ ಎಷ್ಟು ಸಂಕಷ್ಟ ನೀಡಿದೆಯೋ ಅದನ್ನು ತಡೆಯಲು ಹೇರಿದ. ಲಾಕ್ ಡೌನ ಜನರನ್ನು ಕಾಡುತ್ತಲೇ ಇದೆ.ಕೊರೊನಾ ಕಾರಣದಿಂದಾಗಿ ವಿಮಾನ ಹಾರಾಟ, ರೈಲು, ಬಸ್ಸುಗಳ ಓಡಾಟವೆಲ್ಲ ಬಂದ್ ಆಗಿರುವ ಕಾರಣ ಪೂರ್ವನಿಗದಿಯಾಗಿರುವ ಮದುವೆ ಕಾರ್ಯಕ್ರಮಕ್ಕೆ ತೆರಳಲು ಸೈನಿಕ ಬೈಕ್ ಏರಿ ಹೊರಟಿದ್ದ.

ಕೇರಳ ಮೂಲದ ಸೈನಿಕ ಸುವೀಶ್ ಕಳೆದ 6ವರ್ಷಗಳ ಹಿಂದೆ ಸೈನ್ಯವನ್ನು ಸೇರಿ. ಪುಣೆಯಲ್ಲಿರುವ ಸೈನ್ಯ ಎಲೆಕ್ಟ್ರಿಕಲ್ ವಿಭಾಗದಲ್ಲಿ ತಂತ್ರಜ್ಞಾನರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮದುವೆ ಜೂನ 6ಕ್ಕೆ ನಿಗದಿಯಾಗಿದ್ದು. ಸೇನೆ ಹಿರಿಯ ಅಧಿಕಾರಿಗಳು 15 ದಿನಗಳ ರಜೆ ಅನುಮತಿಯನ್ನೂ ನೀಡಿದ್ದಾರೆ .ಕೋವಿಡ್ ನೆಗೆಟಿವ್ ವರದಿಯನ್ನು ಇವರ ಕೈ ಸೇರಿದ ಬಳಿಕ ಕೇರಳವನ್ನು ತಲುಪಲು ಬೈಕ್ ಬಿಟ್ಟರೆ ಬೇರೆ ವಾಹನ ಇಲ್ಲ. ಪರರಾಜ್ಯದಿಂದ ಬಂದವರು ಕೇರಳದಲ್ಲಿ 1ವಾರ ಕ್ವಾರಂಟೈನ್ ಗಳಿಗೆ ಒಳಪಡ ಬೇಕಾಗಿರುವ ಕಾರಣ ನಸುಕಿನ ವೇಳೆ 3 ಗಂಟೆ ಸುಮಾರಿಗೆ ಪುಣೆಯಿಂದ ಹೊರಟು ಬಿಟ್ಟಿದ್ದಾರೆ.ಸುವೀಶ್ ಮಾತ್ರವಲ್ಲದೆ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದ ಇನ್ನೋರ್ವರು ಇದೇ ರೀತಿ ಬೈಕ್ ನಲ್ಲಿಯೇ ತೆರಳಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಜೀವನದಲ್ಲಿ ಮದುವೆ ಒಂದು ಪ್ರಮುಖ ಘಟ್ಟವಾದರೆ. ಈ ಲಾಕ ಡೌನ ಕಾಲದಲ್ಲಿ ಬೈಕ್ ಸವಾರಿ ಸೈನಿಕ ನೆನಪಿಟ್ಟುಕೊಳ್ಳುವ ಬೇಕಾದ ಒಂದು ಕ್ಷಣವಾಗಿದೆ.
Leave a Comment