ಹಳಿಯಾಳ : ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ 7 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ ಅವರು ಗ್ರಾಮಾಂತರ ಭಾಗದಲ್ಲಿ ಸಸಿ ನೆಡುವ ಮೂಲಕ ವರ್ಷಾಚರಣೆ ಆಚರಿಸಿ ಶುಭಕೊರಿದರು.

ತಾಲೂಕಿನ ಕೆಸರೊಳ್ಳಿ, ನೀರಲಗಾ, ಯಡೊಗಾ ಇತರ ಗ್ರಾಮಗಳಿಗೆ ಭೇಟಿ ನೀಡಿ ಕೊರೊನಾ ಕುರಿತು ಜಾಗೃತಿ ಮೂಡಿಸಿ ಕಾರ್ಯಕರ್ತರಿಗೆ ಧೈರ್ಯ ತುಂಬಿದ ಅವರು ಎಲ್ಲೆಡೆ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿರುವ ಸುನೀಲ್ ಹೆಗಡೆ 2014 ರಲ್ಲಿ NDA ಒಕ್ಕೂಟದಿಂದ ದೇಶದ ಪ್ರಧಾನಿಯ ಗದ್ದುಗೆ ಏರಿದ ಆ ದಿನದಿಂದ ದೇಶದಲ್ಲಿ ಪ್ರತಿದಿನವೂ ಸೃಷ್ಟಿಯಾಗಿದ್ದು ಕೇವಲ ಇತಿಹಾಸಗಳಷ್ಟೇ. ಸ್ವಾತಂತ್ರ್ಯಾನಂತರದ ಭಾರತವನ್ನು ಅಭಿವೃದ್ಧಿಯ ಪಥದೆಡೆಗೆ ಸಾಗಿಸಬಲ್ಲ, ದೇಶದ ದಿಕ್ಕನ್ನೇ ಬದಲಾಯಿಸಬಲ್ಲ ನಾಯಕ, ಮಾರ್ಗದರ್ಶಕ ಎದುರಿಗಿರುವಾಗ ಉತ್ಸಾಹ, ಧೈರ್ಯ ಮತ್ತು ಸಂಕಲ್ಪ ಜೊತೆಯಾಗಿ, ರಾಷ್ಟ್ರ ಸೇವೆಗೆ ಸಂಪೂರ್ಣವಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಲು ಸಾಧ್ಯವಾಯಿತು ಎಂದರು.

ನಮ್ಮ ಪ್ರತೀ ಹೆಜ್ಜೆಯಲ್ಲಿಯೂ ಗುರುವಿನ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ಮಾಡಿದ ಪ್ರಧಾನಿ ಅವರು ಕೊರೊನಾವನ್ನು ಸಮರ್ಥವಾಗಿ ಎದುರಿಸುತ್ತಿದ್ದು ದೇಶವನ್ನು ಮಹಾಮಾರಿಯಿಂದ ಕಾಪಾಡುತ್ತಿದ್ದಾರೆ. ಅವರಿಗೆ ದೇವರು ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಗಣಪತಿ ಕರಂಜೆಕರ, ಅನಿಲ ಮುತ್ನಾಳ , ಶಿವಾಜಿ ನರಸಾನಿ ಇತರರು ಇದ್ದರು.

Leave a Comment