ಭಟ್ಕಳ : ತಾಲ್ಲೂಕಾ ವ್ಯಾಪ್ತಿಯಲ್ಲಿ ಕಾರ್ಯ-ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತರಿಗೆ, ಕೋವಿಡ್ ಸೋಂಕಿತರ ಆರೋಗ್ಯದ ಮೇಲೆ ನಿಗಾ ಇಡಲು, ಅವಶ್ಯ ಸಲಕರಣೆಗಳಾದ ಪಲ್ಸ್ ಆಕ್ಸಿಮೀಟರ್ ಹಾಗೂ ಥರ್ಮಲ್ ಸ್ಕ್ಯಾನರ್ ಗಳನ್ನು ಹೆಸ್ಕಾಂ ಭಟ್ಕಳ ಉಪ-ವಿಭಾಗದಿಂದ ತಾಲೂಕಾ ಆರೋಗ್ಯಾಧಿಕಾರಿ ಅವರಿಗೆ ಹಸ್ತಾಂತರಿಸಿದರು.
ಸುಮಾರು 28,000 ಸಾವಿರ ಮೌಲ್ಯದ ಹತ್ತು ಪಲ್ಸ್ ಆಕ್ಸಿಮೀಟರ್ ಹಾಗೂ ಥರ್ಮಲ್ ಸ್ಕ್ಯಾನರ್ ಗಳನ್ನು ಹೆಸ್ಕಾಂ ಭಟ್ಕಳ ಉಪ-ವಿಭಾಗದ ಅಧಿಕಾರಿಗಳ, ಸಿಬ್ಬಂದಿಗಳ ಹಾಗೂ ವಿದ್ಯುತ್ ಗುತ್ತಿಗೆದಾರರ ಸಹಾಯದಿಂದ ವಿತರಿಸಲಾಗಿದೆ.
ಭಟ್ಕಳ ತಾಲ್ಲೂಕಾ ಆರೋಗ್ಯಧಿಕಾರಿಗಳಿಗೆ ಡಾ. ಮೂರ್ತಿರಾಜ್ ಭಟ್ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಹೆಸ್ಕಾಂ ಭಟ್ಕಳದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ, ನಗರ ವಿಭಾಗದ ಸೆಕ್ಷನ್ ಅಧಿಕಾರಿ ಶ್ರೀಕಾಂತ, ವಿದ್ಯುತ್ ಗುತ್ತಿಗೆದಾರರ ಪ್ರಮುಖರು ಸೇರಿದಂತೆ ಮುಂತಾದವರು ಇದ್ದರು.
Leave a Comment