ಹೊನ್ನಾವರ ; ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅನೂಕೂಲವಾಗಲು ಉಚಿತ ಡಯಾಲಿಸಿಸ್ ವ್ಯವಸ್ಥೆಯನ್ನು ಸರ್ಕಾರ ಆರಂಭಿಸಿತ್ತು. ರಾಜ್ಯಮಟ್ಟದಲ್ಲಿ ಉಂಟಾದ ಸಮಸ್ಯೆಯಿಂದ ಹೊನ್ನಾವರ ತಾಲೂಕ ಆಸ್ಪತ್ರೆಯಲ್ಲಿ ಸಮಸ್ಯೆ ಆಗಿತ್ತು. ಇದರಿಂದ ಬಡ ಹಾಗೂ ಮಧ್ಯಮ ವರ್ಗದವರಿಗೆ ಉಚಿತವಾಗಿ ಡಯಾಲಿಸಿಸ್ ಮಾಡಿಸಿಕೊಳ್ಳಲು ಆಗದೆ ಕೊರೋನಾ ಸಂಕಷ್ಟದ ಸಮಯದಲ್ಲಿ ವೆಚ್ಚ ನೀಡುವ ಪರಿಸ್ಥಿತಿ ಎದುರಾಗಿತ್ತು. ಇದನ್ನು ಮನಗಂಡ ಶಾಸಕ ಸುನೀಲ ನಾಯ್ಕ ರಾಜ್ಯ ಸರಕಾರ ಹಾಗೂ ಬಿ.ಆರ್.ಶೆಟ್ಟಿ ಸಂಸ್ಥೆ ನಡುವಿನ ತೀರ್ಮಾನ ಆಗುವವರೆಗೂ ನಿರಂತರವಾಗಿ ತಗಲುವ ಸಂಪೂರ್ಣ ವೆಚ್ಚವನ್ನು ವೈಯಕ್ತಿಕ ಧನ ಸಹಾಯ ನೀಡುವುದಾಗಿ ಘೋಷಿಸಿದರು ಪ್ರಥಮ ಹಂತವಾಗಿ ೫೦ ಸಾವಿರ ರೂ. ಚೆಕ್ನ್ನು ಆಸ್ಪತ್ರೆಯ ವೈದ್ಯಾಧಿಕಾರಿ ರಾಜೇಶ ಕಿಣಿಯವರಿಗೆ ಹಸ್ತಾಂತರಿಸಿದರು,

ಈ ಸಂದರ್ಭದಲ್ಲಿ ಮಾತನಾಡಿದ ಹೊನ್ನಾವರ ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿ ರಾಜೇಶ ಕಿಣಿಯವರು ಡಯಾಲಿಸ್ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಅನಾನೂಕೂಲತೆ ಉಂಟಾಗದಿರಲು ತಮ್ಮ ಸ್ವಂತ ಹಣದಿಂದ ಸಹಾಯ ಮಾಡುತ್ತಿದ್ದು ಆಸ್ಪತ್ರೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದರು.ಶಾಸಕ ಸುನೀಲ ನಾಯ್ಕಮಾತನಾಡಿ ಡಯಾಲಿಸಿಸಗೆ ಒಳಪಡುವ ರೋಗಿಗಳ ಸಂಕಷ್ಟವನ್ನು ಮನಗಂಡು ರೋಗಿಗಳಿಗೆ ಸಮಸ್ಯೆಯಾಗಬಾರದು ಎಂಬ ದೃಷ್ಠಿಯಿಂದ ವೈಯಕ್ತಿಕವಾಗಿ ಸಹಾಯಕ್ಕೆ ಮುಂದಾಗಿದ್ದು ನನ್ನ ಕರ್ತವ್ಯವೆಂದು ಅರಿತು ಕೆಲಸ ಮಾಡುತ್ತಿದ್ದೇನೆ. ಈ ಸೇವೆಯೂ ನಿರಂತರವಾಗಿ ಮುಂದುವರೆಯಲಿದೆ. ಕ್ಷೇತ್ರದ ಯಾವುದೇ ಡಯಾಲಿಸಿಸ್ ರೋಗಿಗೆ ಈ ಸೇವೆ ನಿಲ್ಲಬಾರದು.
ಮುಂದಿನ ದಿನದಲ್ಲಿಯೂ ಸಹ ವ್ಯವಸ್ಥೆ ಮುಂದುವರೆಯಲು ಹಣ ಸಹಾಯ ಮಾಡಲಿದ್ದೇನೆ ಎಂದರು.ಡಯಾಲಿಸಿಸ್ ಘಟಕದಲ್ಲಿ ಕೆಲಸ ಮಾಡುತಿರುವ ಸಿಂಬ್ಬಂದಿಗಳಿಗೆ ಕಳೆದ ಮೂರ ನಾಲ್ಕು ತಿಂಗಳಿನಿಂದ ಸಂಭಳವಾಗಿಲ್ಲಾ ಎನ್ನುವ ಮಾಹಿತಿ ಇದೆ ಎಂದು ಮಾದ್ಯಮದವರು ಕೇಳಿದಾ್ಗ ಪ್ರಶ್ನೆಗೆ ಉತ್ತರಿಸಿದ ಶಾಸಕರು ಈ ವಿಷಯ ಈಗಾಗಲೆ ತಿಳಿದಿದ್ದೆ ಮುಖ್ಯ ಮಂತ್ರಿಗಳ ಜೂತೆ ಚರ್ಚಿಸಿದ್ದು ಶಿಘ್ರವೇ ಸಮಸ್ಯೆ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ ,ಬಿಜೆಪಿ ತಾಲೂಕ ಅಧ್ಯಕ್ಷ ರಾಜೇಶ ಭಂಡಾರಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ,ಜಿಲ್ಲಾ ಹಿಂದುಳಿದ ಮೊರ್ಚಾ ಉಪಾಧ್ಯಕ್ಷ ಗಣಪತಿ ನಾಯ್ಕ ಬಿ.ಟಿ, ವಿಘ್ನೇಶರ ಹೆಗಡೆ, ಸುರೇಶ್ ಖಾರ್ವಿ ಉಪಸ್ಥಿತರಿದ್ದರು.
Leave a Comment