ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಬಾಳೆಗದ್ದೆಯ ನಾಲ್ಕಾರು ಹುಡುಗರು ಬಹುತೇಕರು ಓದಿನ ಜೊತೆಗೆ ಕೂಲಿ ಕೆಲಸಕ್ಕೆ ಹೋಗುವರಾಗಿದ್ದರೂ ಲಾಕ್ ಡೌನ್ ಸಮಯದಲ್ಲಿ ಸಕಾರಾತ್ಮಕವಾಗಿ ತೊಡಗಿಕೊಂಡು ಕಿರುಚಿತ್ರವೊಂದರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ.ಅವರೊಲ್ಲಬ್ಬನಾದ ಅವಿ ಡಾರ್ಲಿಂಗ್ ಎಂಬ ಹೆಸರಿನಿಂದ ನಿರ್ದೇಶನ ಕೈಗೆತ್ತಿಕೊಂಡ ಅವಿನಾಶ ಪಟಗಾರ ಹೊಟೇಲ್ ಮೆನೆಜ್ಮೆಂಟ್ ಓದಿರುವ ಯುವಕ ಚಿತ್ರದ ಸೂತ್ರಧಾರ, ಬುಧವಾರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಈಚಿತ್ರ ಗ್ರಾಮದ ನಾಲ್ಕಾರು ಹುಡುಗರ ಸಾಧನೆಯ ಫಲವಿದು ಎಂದು ಉಮ್ಮಚಗಿ ಗ್ರಾಪಂ ಸದಸ್ಯ ಗ.ರಾ ಭಟ್ಟ ಅಭಿಮಾನದಿಂದ ಹೇಳುತ್ತಾರೆ.
ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿರುವ ಮರ್ಕ್ಯುರಿ ಕಿರುಚಿತ್ರದಲ್ಲಿ ಈ ಯುವಕರೇ ಪಾತ್ರಧಾರಿಗಳು.೮೦% ರಷ್ಟು ಚಿತ್ರೀಕರಣ ಸುತ್ತ ಮುತ್ತ ಗ್ರಾಮಗಳಾದ ಬಾಳೆಗದ್ದೆ , ತೋಟದಕಲ್ಲಳ್ಳಿ, ಅರೆಕಾನ್, ರಾಮದೇವರಗುಡ್ಡ, ಮಾಸ್ತಿಬೇಣ ಮೊದಲಾದ ಕಡೆ ನಡೆಸಿದ್ದು ಇನ್ನು ಹತ್ತು ದಿನದ ಚಿತ್ರೀಕರಣ ಮುಗಿದರೆ ಚಿತ್ರ ನೋಡುಗರ ಮುಂದೆ ಯೂಟ್ಯೂಬ್ ಲಿಂಕ್ ಮೂಲಕ ತೆರೆದುಕೊಳ್ಳುತ್ತದೆ.ಕಥೆ, ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ, ಸಂಕಲನ ಅವಿ ಡಾರ್ಲಿಂಗ್ (ಅವಿನಾಶ ಪಟಗಾರ) ಅವರದ್ದೇ ಸಹಕಾರ ಮಣಿ ಬಾಳೆಗದ್ದೆ ನೀಡಿದ್ದಾರೆ.
ಚಿತ್ರದ ಮುಖ್ಯ ಭೂಮಿಕೆಯಲ್ಲಿ ಟಿಕ್ ಟಾಕ್ ಸ್ಟಾರ್ ಎಂದು ಹೆಸರು ಮಾಡಿರುವ ಪ್ರಕಾಶ್ ಪಟಗಾರ ಬಾಳೆಗದ್ದೆ, ಮಣಿ ಪಟಗಾರ ಬಾಳೆಗದ್ದೆ, ಚಂದು ಪಟಗಾರ್ ಇದ್ದರೆ, ಇನ್ನುಳಿದಂತೆ ಕಲಾವಿದರಾಗಿ ಸುಬ್ರಹ್ಮಣ್ಯ ಪಟಗಾರ ಬಾಳೆಗದ್ದೆ, ವಿನಾಯಕ ಬಾಳೆಗದ್ದೆ, ಲೋಕೇಶ್, ಮಹೇಶ್, ಮಣಿಕಂಠ, ವಿಜಯ್, ಸಂತೋಷ ರಾಮಚಂದ್ರ ಗುನಗ, ಉದಯ್, ಮನೋಜ್ ಸಿದ್ದಿ, ಗಣೇಶ್ ಪಟಗಾರ ಮೊದಲಾದವರಿದ್ದಾರೆ.
Leave a Comment