ಹೊನ್ನಾವರ; ತಾಲೂಕಿನ ಲಯನ್ ಕ್ಲಬ್ ವತಿಯಿಂದ ಹಳದೀಪುರ ಅಂಗವಿಕಲ ಮಹಿಳೆ ನಾಗವೇಣಿ ಶೇಟ ಇವರಿಗೆ ಅತ್ಯಾಧುನಿಕ ವೀಲ್ಚೇರ್ ಮತ್ತು ಆಹಾರ ಸಾಮಗ್ರಿಯನ್ನು ಲಯನ್ಸ್ ಕ್ಲಬ್ ಅಡಿಯಲ್ಲಿ ನೀಡಲಾಯಿತು. ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಲಯನ್ ಮಹೇಶ್ ನಾಯ್ಕ, ಲಯನ್ ಜನಾರ್ಧನ್ ನಾಯ್ಕ,ಹಾಗೂ ಹಳದೀಪುರ ಗ್ರಾ.ಪಂ. ಅಧ್ಯಕ್ಷ ಅಜಿತ್ ನಾಯ್ಕ ಹಾಗೂ ಉಪಾಧ್ಯಕ್ಷೆ ಪುಷ್ಪಾ ನಾಯ್ಕ, ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ವಾರ್ಡಿನ ಸದಸ್ಯೆ ಮಮತಾ ಶೇಟ್ ಸ್ಥಳೀಯರಾದ ಚೇತನ್ ನಾಯ್ಕ ಹಾಗೂ ಲಯನ್ಸ್ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ ಕಾರ್ಯದರ್ಶಿ ಎಂ ಜಿ ನಾಯ್ಕ, ಪದಾಧಿಕಾರಿಗಳಾದ ಎಸ್.ಜೆ. ಕೈರನ, ಎನ್.ಜಿ.ಭಟ್, ರಾಜೇಶ್ ಸಾಳೆಹಿತ್ತಲ, ಲಯನ್ ಸದಸ್ಯರು ಹಾಜರಿದ್ದರು.
Leave a Comment