

ಯಲ್ಲಾಪುರ : ತಾಲ್ಲೂಕಿನಲ್ಲಿ ಶನಿವಾರ ಮಳೆ ಆರ್ಭಟ ಸ್ವಲ್ಪ ಕಡಿಮೆಯಾದರೂ ಕಳೆದ ಮರ‍್ನಾಲ್ಕು ದಿನದಿಂದ ಅಲ್ಲಲ್ಲಿ ಭಾರಿ ಮಳೆ ಸುರಿದಿದ್ದರಿಂದ ತಾಲ್ಲೂಕಿನ ಮದ್ನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾದೇವಕೊಪ್ಪದ ಬಾಬು ನಕಲು ಪಾಟೀಲ್ ಎಂಬುವವರ ಮನೆ ಗೋಡೆ ಕುಸಿದು ಬಿದ್ದಿದ್ದು, ಶೇ ೨೦ ಹಾನಿಯಾಗಿದೆ ಎಂದು ಕಂದಾಯ ಇಲಾಖೆಯ ಮಾಹಿತಿ ತಿಳಿಸಿದೆ.
ತಾಲ್ಲೂಕಿನ ಚಂದ್ಗುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಹುತಕಂಡ್ ಗ್ರಾಮದ ಸಾಸ್ಮೆಗದ್ದೆಯಲ್ಲಿ ನರಸಿಂಹ ಸಾತೊಡ್ಡಿ ಎಂಬುವರ ಆಕಳು ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದೆ.ಕಂದಾಯ ಇಲಾಖೆಯ ಮಾಹಿತಿ ತಿಳಿಸಿದೆ.
Leave a Comment