ಭಟ್ಕಳ: ಬೆಂಗಳೂರಿನಿಂದ ಕಾರವಾರಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಮಹಿಯೋರ್ವಳ ಮೊಬೈಲ್ ಫೋನ್ ಮತ್ತು ಎ. ಟಿ. ಎಂ ಕಳ್ಳತನ ಮಾಡಿ ಪರಾರಿಯಾದ ಇಬ್ಬರು ಯುವಕರನ್ನು ಮುರುಡೇಶ್ವರ ಸಮುದ್ರ ತೀರದಲ್ಲಿ ಬಂಧಿಸಲಾಗಿದೆ .
ಬಂಧಿತ ಆರೋಪಿಗಳು ನಂದನ್ ಕೆ ಮತ್ತು ಕಾಂತ್ರಾಜು ವಿ ಆರ್ ಬೆಂಗಳೂರಿನ ನೇಲಮಂಗಲ ನಿವಾಸಿ ಎಂದು ತಿಳಿದು ಬಂದಿದೆ.
ಬೆಂಗಳೂರಿನಿಂದ ಅಂಕೋಲಕ್ಕೆ ರೈಲಿನಲ್ಲಿ ಪ್ರಾಯಾಣಿಸುತ್ತಿದ್ದ ಮಹಿಳೆಯೋರ್ವಳು ಮಂಕಿ ರೈಲ್ವೆ ನಿಲ್ದಾಣದಲ್ಲಿ ತನ್ನ ಮೊಬೈಲ್ ಕಳ್ಳತನವಾಗಿರುವ ಬಗ್ಗೆ ಅಂಕೋಲಾ ರೈಲ್ವೆ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲಿ ಮಾಹಿತಿ ಪಡೆದುಕೊಂಡ ಭಟ್ಕಳ ಎಸ್‌ಐ ಶಿಶ್‌ಪಾಲ್ ಸಿಂಗ್ ಮಂಕಿ ನಿಲ್ದಾಣದ ಸಿಸಿಟಿವಿ ಪರಿಶೀಲಿಸಿದಾಗ ಇಬ್ಬರು ಅನುಮಾನಾಸ್ಪದ ಯುವಕರು ಸಿಸಿಟಿವಿಯಲ್ಲಿ ಕಂಡು ಬಂದಿದ್ದು.
ಇಬ್ಬರ ಯುವಕರ ಬಗ್ಗೆ ಮಂಕಿ ರೈಲ್ವೇ ನಿಲ್ದಾಣದಲ್ಲಿ ವಿಚಾರಿಸಿದಾಗ ಅವರು ಮಂಗಳೂರು ರೈಲು ಮತ್ತು ಮುರ್ಡೇಶ್ವರ ದೇವಸ್ಥಾನದ ಬಗ್ಗೆ ವಿಚಾರಿಸಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ರೈಲ್ವೆ ಪೊಲೀಸ ತಂಡ ಮುರುಡೇಶ್ವ ತೆರಳಿದ್ದು ಅಲ್ಲಿನ ಸಮುದ್ರ ತೀರದಲ್ಲಿ ಯುವಕರಿರುದನ್ನು ಗಮನಿಸಿ ವಿಚಾರಣೆ ನಡೆಸಿದಾಗ ಯುವಕರು ಮೊಬೈಲ್ ಕಳ್ಳತನ ಮಾಡಿರುವುದನ್ನು ನಿರಾಕರಿಸಿದ್ದಾರೆ.
ನಂತರ ಮುರುಡೇಶ್ವರ ಪೊಲೀಸರ ಸಹಾಯದಿಂದ ಯುವಕರು ತಂಗಿದ್ದ ಲಾಡ್ಜ್ ಕೊಠಡಿ ಪರಿಶೀಲಿಸಿದಾಗ ಕಳ್ಳತನ ಮಾಡಿದ ಮೊಬೈಲ್ ಫೋನ್ ಹಾಗೂ ಮಹಿಳೆಯ ಒಂದು ಎಟಿಎಂ ಕಾರ್ಡ್ ವಶಪಡಿಸಿಕೊಂಡರು
ಮಹಿಳೆಯ ದೂರಿನನ್ವಯ ಆರೋಪಿಗಳ ವೈದ್ಯಕೀಯ ಪರೀಕ್ಷೆಯ ನಂತರ ಹೆಚ್ಚಿನ ಕಾನೂನು ಕ್ರಮಕ್ಕಾಗಿ ಮಂಕಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು.
Leave a Comment