ಯಲ್ಲಾಪುರ : ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕದಲ್ಲಿ ಹೊನ್ನಾವರ ಪೋರ್ಟ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರ ಪಟ್ಟಣದ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಹಾಗೂ ಸ್ಥಳೀಯ ಮೀನುಗಾರ ಮುಖಂಡರೊಂದಿಗೆ ಸಭೆ ನಡೆಸಿದರು.
ಬಂದರು ನಿರ್ಮಾಣದ ಸಾಧಕ ಬಾದಕಗಳ ಬಗ್ಗೆ ಕುರಿತು ಸ್ಥಳೀಯ ಮುಖಂಡರೊಂದಿಗೆ ವಿಸ್ತೃತವಾಗಿ ಚರ್ಚಿಸಿದರು, ಮೀನುಗಾರರ ಅಹವಾಲನ್ನು ಸ್ವೀಕರಿಸಿ ಸಾಂಪ್ರದಾಯಿಕ ಮೀನುಗಾರಿಕೆ ಹಾಗೂ ವಾಸ್ತವ ಇರುವ ಸ್ಥಳೀಯ ನಿವಾಸಿಗಳನ್ನು ತೊಂದರೆ ಆಗದ ರೀತಿಯಲ್ಲಿ ಬಂದರನ್ನು ನಿರ್ಮಾಣ ಮಾಡುವುದಕ್ಕೆ ಕ್ರಮವಹಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿಸಲಾಯಿತು.
ಬಂದರು ನಿರ್ಮಾಣದ ಬಗ್ಗೆ ಸ್ಥಳೀಯರಲ್ಲಿ ಇದ್ದ ಕೆಲವೊಂದು ಗೊಂದಲಗಳ ಬಗ್ಗೆ ಹಲವು ಸುತ್ತಿನ ಚರ್ಚೆಯಲ್ಲಿ ಮೀನುಗಾರ ಮನ ಒಲಿಸುವ ಪ್ರಯತ್ನವನ್ನು ಸಚಿವರು ಮಾಡಿದರು, ಮೀನುಗಾರರ ಹಿತಕಾಯುವುದು ನನ್ನ ಉದ್ದೇಶವಾಗಿದೆ ಇದಕ್ಕೆ ಸರಕಾರವು ಕಟ್ಟಿ ಬದ್ದವಾಗಿದೆ, ಕೆಲವೇ ದಿನಗಳಲ್ಲಿ ಅಧಿಕಾರ ತಂಡದೊಂದಿಗೆ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಮೀನುಗಾರ ಹಾಗೂ ಮೀನುಗಾರರ ಮುಖಂಡರೊಂದಿಗೆ ಚರ್ಚಿಸುವುದಾಗಿ ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಸುನೀಲ್ ನಾಯ್ಕ,ಜಿಲ್ಲಾಧಿಕಾರಿ ಮುಲೈಮುಹಿಲನ್ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಿವಪ್ರಕಾಶ್ ದೇವರಾಜ್, ಭಟ್ಕಳ ಡಿ.ಎಸ್.ಪಿ ಬೆಳ್ಳಿಯಪ್ಪ, ಹೊನ್ನಾವರ ಪಿ.ಐ ಶ್ರೀಧರ್, ಬಂದರಿನ ಕ್ಯಾಪ್ಟನ್ ಸ್ವಾಮಿ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ನಾಗರಾಜ್, ಕಂಪನಿಯ ಮುಖ್ಯಕಾರ್ಯನಿರ್ವಹಕ ಶ್ರೀ ಸೂರ್ಯಪ್ರಕಾಶ ಗುತ್ತಾ ಉಪಸ್ಥಿತರಿದ್ದರು.
Leave a Comment