ಯಲ್ಲಾಪುರ: ತಾಲೂಕಿನ ಕೋಳಿಕೇರಿ ಸಮೀಪದ ಬೊಮ್ಮಡಿಕೊಪ್ಪ ಗ್ರಾಮದಲ್ಲಿ ಮೇಯಲು ಬಿಟ್ಟ ಎಮ್ಮೆಗಳನ್ನು ತರಲು ಹೋದ ವ್ಯಕ್ತಿಯೊಬ್ಬನ ಮೇಲೆವ್ಯಕ್ತಿಯೊಬ್ಬನ ಮೇಲೆ ರವಿವಾರ ಸಂಜೆ ಕರಡಿಯೊಂದು ದಾಳಿ ಮಾಡಿದ್ದು ಅವರ ಸ್ಥಿತಿ ಗಂಭಿರವಾಗಿದೆ.
ಬೊಮ್ಮಡಿಕೊಪ್ಪ ನಿವಾಸಿ ದನಗರ ಗೌಳಿ ಸಮಾಜದ ಬಾಬು ಬೊಮ್ಮು ಪಟಗಾರೆ (೫೮) ಕರಡಿ ದಾಳಿಯಿಂದ ಮುಖ ಹಾಗೂ ತಲೆ ಗಂಭೀರ ಗಾಯಗೊಂಡಿದ್ದು ತಾಲೂಕಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೀಮ್ಸ ಆಸ್ಪತ್ರೆಗೆ ದಾಖಲಿಸಲಾಗಿದೆ.
Leave a Comment