ಹೊನ್ನಾವರ ತಾಲೂಕಿನ ಮಂಕಿ ವ್ಯಾಪ್ತಿಯ ಮಂಕಿ ಆಸ್ಪತ್ರೆಯ ಆಟೋ ರಿಕ್ಷಾ ನಿಲ್ದಾಣಕ್ಕಾಗಿ 1.35 ಲಕ್ಷ ರೂಪಾಯಿ ವೈಯಕ್ತಿಕ ವೆಚ್ಚದಲ್ಲಿ ಶಾಸಕ ಸುನೀಲ ನಾಯ್ಕ ನಿರ್ಮಿಸಿದ್ದರು. ಸೋಮವಾರ ನಿಲ್ದಾಣದ ಉದ್ಘಾಟನೆಯನ್ನು ರಿಕ್ಷಾ ಚಾಲಕ ಮತ್ತು ಮಾಲೀಕರ ಅಪೇಕ್ಷೆಯಂತೆ ಶಾಸಕ ಸುನೀಲ ನಾಯ್ಕ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರುಆಟೋ ರಿಕ್ಷಾ ನಿಲ್ದಾಣಕ್ಕೆ ಸೂರು ನಿರ್ಮಿಸುವುದರಿಂದ ಆಟೋ ಚಾಲಕರು ಮತ್ತು ಮಾಲೀಕರಿಗೆ ಮಳೆ, ಬಿಸಿಲಿನಿಂದ ರಕ್ಷಣೆ ಸಿಗಲಿದೆ. ಕೊರೋನಾ ಸಮಯದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಆಟೋ ಚಾಲಕರಿಗೆ ರಾಜ್ಯ ಸರ್ಕಾರ ನೆರವಾಗಿದೆ ಎಂದು ಸ್ಮರಿಸಿದರು. ಆಟೋ ಚಾಲಕರು ಶಾಸಕ ಸುನೀಲ ನಾಯ್ಕರನ್ನು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಹಾಜರಿದ್ದರು.
Leave a Comment