ಯಲ್ಲಾಪುರ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವಿವಾಹಿತ ವ್ಯಕ್ತಿಯೋರ್ವನನ್ನು ಆತನ ಹೆಂಡತಿಯ ಮನೆಯವರೇ ಕೊಲೆ ಮಾಡಿದ ಘಟನೆ ತಾಲೂಕಿನ ಚಿಕ್ಕ ಮಾವಳ್ಳಿ ಎಂಬಲ್ಲಿ ನಡೆದಿದೆ.ರಾಜೇಶ್ ನಾಯ್ಕ ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದು ಈತ ಆಗಾಗ ಆಸ್ತಿ ವಿಷಯವಾಗಿ ಹೆಂಡತಿ ಮತ್ತು ಅವರ ಮನೆಯವರೊಂದಿಗೆ ಜಗಳ ತೆಗೆದು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಹೆಂಡತಿ ಮನೆಯವರು ರಾಜೇಶನನ್ನು ಗುದ್ದಲಿಯಿಂದ ಹೊಡೆದು ಕೊಲೆ ಮಾಡಿ ಸುಟ್ಟು ಹಾಕಿ,ಮೂಳೆ, ಚಪ್ಪಲಿ ಗಳನ್ನುಅರಣ್ಯ ಪ್ರದೇಶದಲ್ಲಿ ಎಸೆದು ಸಾಕ್ಷ್ಯನಾಶಪಡಿಸಿ,ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು.
ಅಲ್ಲದೇ ಪೊಲೀಸರ ದಾರಿ ತಪ್ಪಿಸಲು ರಾಜೇಶ್ ದೇಹಳ್ಳಿಯ ಅರಣ್ಯ ಪ್ರದೇಶದಲ್ಲಿ ತೆರಳಿದಾಗ ಯಾವುದೋ ಕಾಡು ಪ್ರಾಣಿ ದಾಳಿ ಮಾಡಿ ಸಾವು ಸಂಭವಿಸಿದೆ ಎಂದು ಬಿಂಬಿಸಿ ಮೃತನ ಬೈಕ್, ಮೊಬೈಲ್ ಪೋನ್ ಅರಣ್ಯ ಪ್ರದೇಶದಲ್ಲಿ ದೊರೆಯುವಂತೆ ಮಾಡಿದ್ದರು.
ಸಂಶಯಗೊಂಡ ಪೊಲೀಸರು ಹೆಚ್ಚಿನ ತನಿಖೆ ನಡೆಸಿದಾಗ ಕೊಲೆಯ ಕೃತ್ಯ ಬೆಳಕಿಗೆ ಬಂದಿದ್ದು
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಶ್ವೇತಾ ರಾಜೇಶ್ ನಾಯ್ಕ (29) ಮಾವ ದೀಪಕ ಬುದ್ಧಾ ಮರಾಠಿ (53) ಅತ್ತೆ ಯಮುನಾ ದೀಪಕ ಮರಾಠಿ (50) ಮತ್ತು ಬಾಮೈದ ಗಂಗಾಧರ ದೀಪಕ ಮರಾಠಿ (25) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಶಿರಸಿ ಡಿ.ವೈ.ಎಸ್.ಪಿ ರವಿ ನಾಯ್ಕ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಸುರೇಶ ಯಳ್ಳೂರ್ ನೇತೃತ್ವದಲ್ಲಿ ಪಿ.ಎಸ್. ಐ ಮಂಜುನಾಥ ಗೌಡರ್, ಪಿ.ಎಸ್. ಐ ಮುಷಾಹಿದ್ ಅಹ್ಮದ್ ಮತ್ತು ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .
Leave a Comment