ಕಲಬುರಗಿ;
ರಾಜ್ಯ ಸರ್ಕಾರ ಕೃಷಿಗೆ ಆದ್ಯತೆ ನೀಡಿದೆ ಅಲ್ಲದೆ ಪ್ರಸ್ತಕ ರೈತರಿಗೆ 20 ಸಾವಿರ ಕೊಟ್ಟಿ ರೂ ಬೆಳೆ ಸಾಲ ನೀಡುವ ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ರೈತರಿಗೆ ವ್ಯಾಪಕವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಬೆಳೆಸಾಲ, ಸ್ವಸಹಾಯ ಸಂಘ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಮಧ್ಯಮಾವಧಿ ಸಾಲ ವಿತರಿಸಲು ಯೋಚಿಸಲಾಗಿದೆ. ಕಳೆದ ವರ್ಷ 16 641 ಕೋಟಿ ರೂ ಬೆಳೆ ಸಾಲ ವಿತರಿಸಲಾಯಿತು. ಈ ಸಲ 32 ಲಕ್ಷ ರೈತರಿಗೆ 20 ಸಾವಿರ ಕೋಟಿ ರೂ ಸಾಲ ನೀಡಲು ನಿರ್ಧರಿಸಲಾಗಿದೆ ಎಂದಿದ್ದಾರೆ. ರಾಜ್ಯದಲ್ಲಿರುವ 5500 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗಳ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸಲು 198 ಕೋಟಿ ರು ಗಣಿತ ಸೇರಿದಂತೆ ಇತರ ಕಾರ್ಯಗಳಿಗೆ ವಿನಿಯೋಗಿಸಲು ಮುಂದಾಗಲಾಗಿದೆ ಎಂದು ಹೇಳಿದಾರೆ.
Leave a Comment