ಭಟ್ಕಳ: ಗದ್ದೆ ಕೆಲಸ ಮಾಡಿ ಹೊಳೆಯಲ್ಲಿ ಕೈ ತೊಳೆಯಲು ಹೋಗಿದ್ದ ವ್ಯಕ್ತಿಯೋರ್ವ ನೀರು ಪಾಲಾದ ಘಟನೆತಾಲೂಕಿನ ಮುಂಡಳ್ಳಿಯಲ್ಲಿ ಘಟನೆ.
ಮೃತ ವ್ಯಕ್ತಿ ಶ್ರೀಧರ ದೇವಾಡಿಗ (40) ಎಂದು ತಿಳಿದು ಬಂದಿದೆ. ಈತ ಗದ್ದೆ ಕೆಲಸ ಮುಗಿಸಿ ಕೈ ತೊಳೆಯಲು ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಯಲ್ಲಿ ಬಿದ್ದು ಕೊಚ್ಚಿಹೋಗಿದ್ದು ಇದನ್ನು ಗಮನಿಸಿದ ಸ್ಥಳೀಯ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದು ಸ್ಥ ವ್ಯಕ್ತಿಯ ಮೃತ ದೇಹದ ಪತ್ತೆಗೆ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ಗಂಟೆ ನೀರಿನಲ್ಲಿ ಸತತವಾಗಿ ಶೋಧ ಕಾರ್ಯ ನಡೆಸಿದ್ದು ನೀರಿನ ರಭಸ ಹೆಚ್ಚಿರುವುದರಿಂದ ಮೃತ ದೇಹ ಕೊಚ್ಚಿ ಹೋಗಿರ ಬಹುದೆಂದು ರಕ್ಷಣಾ ಕಾರ್ಯವನ್ನು ಸ್ಥಗಿತಗೊಳಿಸಿ ಮರಳಿದ್ದಾರೆ.
Leave a Comment