ಯಲ್ಲಾಪುರ : ಸ್ವಚ್ಛ ಭಾರತ ಮೀಷನ್ ಯೋಜನೆಯ ಘನತ್ಯಾಜ್ಯ ವಿಲೇವಾರಿ ಘಟಕ ಯೋಜನೆ ಅಡಿಯಲ್ಲಿ ಜಿಲ್ಲೆಯಾದ್ಯಂತ ಸುಮಾರು ೬೬ ಆಟೋ ಟಿಪ್ಪರ್ ವಾಹನಗಳು ಮಂಜೂರಾಗಿದ್ದು, ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಪಟ್ಟಣದ ಪಂಚಾಯತ ರಾಜ್ ಇಂಜಿನಿಯರಿAಗ್ ಉಪ ವಿಭಾಗ ಕಾರ್ಯಾಲಯದ ಆವರಣದಲ್ಲಿ ಸಾಂಕೇತಿಕವಾಗಿ ಗ್ರಾಮ ಪಂಚಾಯತ ಅಧ್ಯಕ್ಷರ ಮೂಲಕವಾಗಿ ವಾಹನವನ್ನು ಹಸ್ತಾಂತರಿಸಿ ಮಾತನಾಡಿ ಯಾವದೇ ಕೆಲಸವನ್ನು ಸ್ವಚ್ಛತೆ ಮತ್ತು ದಕ್ಷತೆಯಿಂದ ಮಾಡಿದಾಗ ಯಶಸ್ಸು ಸಾಧ್ಯ.
ಮಹಾನಗರ ಪ್ರದೇಶಗಳಲ್ಲಿ ಘನತಾಜ್ಯ ವಿಲೇವಾರಿ ಮಾಡಲು ಸಾಗಾಣಿಕೆ ವೆಚ್ಚವೇ ಲಕ್ಷಾಂತರ ರೂಗಳನ್ನು ವ್ಯಯಿಸಿ ಬಹು ದೊಡ್ಡ ಸವಾಲನ್ನುಎದುರಿಸುಂತಾಗಿದೆ.ಎಲ್ಲಾ ಘನತಾಜ್ಯ ಉತ್ಪದನೆಗೆ ಕಾರಣಿಕರ್ತರು ಕೇವಲ ನಗರದವರುÀ ಮಾತ್ರ ಅಲ್ಲ ಹಳ್ಳಿಗರು ಪಟ್ಟಣಕ್ಕೆ ವಲಸೆಯೂ ಕಾರಣವಾಗಿದೆ ಎಂದರಲ್ಲದೇ ಎಲ್ಲವನ್ನು ಸರಕಾರವೇ ಕೊಡಬೇಕು ಎಂದು ಕೂರದೇ ಗ್ರಾಮ ಪಂಚಾಯತಿಗಳು ಮೂಲ ಉತ್ಪನ್ನವನ್ನು ಜಾಸ್ತಿ ಮಾಡಿಕೊಳ್ಳಬೇಕು.ಪುಕ್ಕಟೆ ಕೊಟ್ಟಿದ್ದಾರೆ ಎಂದು ನಿರ್ಲಕ್ಷಿಸದೇ ಅನುತ್ಪಾದಕ ವೆಚ್ಚ ಕಡಿಮೆ ಮಾಡಿ ವಾಹನ ನಿರ್ವಹಣೆ ಸರಿಯಾಗಿ ಮಾಡಿ ಸಮರ್ಪPವಾಗಿÀ ಬಳಕೆ ಮಾಡಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ವಾಯುವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದ ವಿ.ಎಸ್.ಪಾಟೀಲ್, ಪಂಚಾಯತ ರಾಜ್ಯ ವಿಕೇಂದ್ರೀಕರಣ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿದರು. ಪ್ರಮುಖರಾದ ವಿಜಯ ಮಿರಾಶಿ, ಪಟ್ಟಣ ಪಂಚಾಯತ ಸದಸ್ಯರಾದ ಸತೀಶ ನಾಯ್ಕ ಕಾರ್ಯನಿರ್ವಾಹಕ ಇಂಜಿನೀಯರ್ ಅಶೋಕ ಬಂಟ್ ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
Leave a Comment