ಹೊನ್ನಾವರ ಕುಮಟಾ ತಾಲೂಕಿನ ವಿದ್ಯಾರ್ಥಿಗಳು ಲಾಕ್ ಡೌನ್ ಅವಧಿಯಲ್ಲಿ ಸ್ಮಾರ್ಟಪೋನ್ ಗೆಲ್ಲುವ ಅವಕಾಶವನ್ನು ಕಾಂಗ್ರೇಸ್ ಕಾರ್ಯದರ್ಶಿ ರವಿ ಶೆಟ್ಟಿ ಕವಲಕ್ಕಿ ವಿನೂತನ ಕಾರ್ಯಕ್ರಮಕ್ಕೆ ಆಯೋಜಿಸಿದ್ದಾರೆ.
ಕುಮಟಾ ಹೊನ್ನಾವರ ತಾಲೂಕಿನ 16 ವರ್ಷದೊಳಗಿನ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದ ಮೂಲಕ ವಾಕ್ಸಿನ್ ಲಸಿಕೆಯ ಮಹತ್ವ ಹಾಗೂ ಸದುಪಯೋಗದ ಜೊತೆ ವಾಕ್ಸಿನ್ ಪಡೆಯಲು ಪೋತ್ಸಾಹಿಸುವ ರೀತಿಯಲ್ಲಿ ಹಾಡು, ನೃತ್ಯ, ಬರಹ, ನಾಟಕ, ಭಾಷಣ ಯಾವ ರೀತಿಯಲ್ಲಾದರೂ 2 ನಿಮಿಷದ ವಿಡಿಯೋ ಮಾಡಿ ವಾಕ್ಸಿನೇಟ್ ಕುಮಟಾ ಹೊನ್ನಾವರ ಹ್ಯಾಸಟ್ಯಾಗ್ ಬಳಸಿ ಫೇಸ್ ಬುಕ್, ವಾಟ್ಸಪ್, ಟ್ವೀಟರ್, ಇನಸ್ಟ್ರಾಗಾಂ, ಯುಟ್ಯೂಬ್ ಸೇರಿದಂತೆ ಯಾವುದೇ ಬಗೆಯ ಸಾಮಾಜಿಕ ಜಾಲತಾಣದಲ್ಲಿ 2 ನಿಮಿಷದ ವಿಡಿಯೋ ಅಪ್ಲೋಡ್ ಮಾಡಬಹುದು.
ವಿದ್ಯಾರ್ಥಿಗಳ ಖಾತೆ ಇಲ್ಲದಿದ್ದರೆ ಪೋಷಕರ ಅಥವಾ ಸಂಭದಿಕರ ಖಾತೆಯಿಂದಲೂ ಮಾಡಬಹುದು. ಅಪ್ಲೋಡ್ ಆದ ಬಳಿಕ ಲಿಂಕ್ ವಾಕ್ಷಿನೇಟ್ ಕುಮಟಾ ಹೊನ್ನಾವರ ವೆಬ್ ಪೇಜ್ ಸಂಪೂರ್ಣ ಮಾಹಿತಿಯೊಂದಿಗೆ ಅಪ್ಲೋಡ್ ಮಾಡಿದರೆ ಅತ್ಯತ್ತಮವಾದ 10 ವಿದ್ಯಾರ್ಥಿಗಳಿಗೆ ಸ್ಮಾಟ್ ಪೋನ್ ಉಡುಗೊರೆ ರೂಪದಲ್ಲಿ ನೀಡಲು ಸಂಘಟಕರು ತಿರ್ಮಾನಿಸಿದ್ದಾರೆ.
ಜಿಲ್ಲಾ ಕಾರ್ಯದರ್ಶಿ ರವಿ ಶೆಟ್ಟಿ ಕವಲಕ್ಕಿ ಅಧಿಕೃತವಾಗಿ ವೆಬ್ ಪೇಜ್ ಚಾಲನೆ ನೀಡಿದರು. ನಂತರ ಮತನಾಡಿ ಕೊವಿಡ್ ಜನರು ತತ್ತರಿಸಿದ್ದು, ಮೂರನೇ ಅಲೆಯ ಮುನ್ಸೂಚನೆ ನೀಡಲಾಗುತ್ತಿದೆ. ಮುಂಜಾಗ್ರತೆಗಾಗಿ ವಾಕ್ಸಿನ್ನಿಂದ ಕೋರೋನಾ ನಿಯಂತ್ರಿಸಬಹುದು. ವಾಕ್ಸಿನ್ ಪ್ರೇರೆಪಣೆಗಾಗಿ ಈ ಕಾರ್ಯಕ್ರಮ ಆಯೋಜಿಸಿದ್ದು ನಿಮ್ಮಲ್ಲಿರುವ ಕ್ರೀಯಾಶೀಲತೆ ಬಳಸಿ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಲಕ್ಕಿ ಸ್ಮಾರ್ಟಪೋನ್ ಗೆಲ್ಲಿರಿ.
ಕಾಂಗ್ರೇಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಎನ್, ಸುಬ್ರಹ್ಮಣ್ಯ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋರೋನಾ ನಿಯಂತ್ರಣ ಮಾಡಲು ವಿಫಲವಾಗಿದೆ. ಮುಂದಿನ ಅಲೆ ನಿಯಂತ್ರಣಕ್ಕೆ ವಾಕ್ಸಿನೇಷನ್ ಅನಿವಾರ್ಯವಾಗಿದೆ. ಇದರ ಬಗ್ಗೆ ಜಾಗೃತಿ ಮುಡಿಸಲು ಜಿಲ್ಲಾ ಕಾಂಗ್ರೇಸ್ ಕಾರ್ಯದರ್ಶಿ ರವಿ ಶೆಟ್ಟಿ ರಾಜ್ಯ ಕಾಂಗ್ರೇಸ್ ಕರೆಯ ಮೇರೆಗೆ ವಿನೂತನ ಕಾರ್ಯಕ್ರಮ ಆಯೋಜಿಸಿದ್ದಾರೆ. ವಾಕ್ಸಿನ್ ಪಡೆಯಲು ಹಿಂಜರಿಯುತ್ತಿದ್ದು ವಾಕ್ಸಿನ್ ಅಣಿಗೊಳಿಸುವ ಜೊತೆ, ಇದರ ಸದುಪಯೋಗದ ಬಗ್ಗೆ ಅರಿವು ಮೂಡಿಸಲು ಇದು ಅನೂಕೂಲಾಗಲಿದೆ. ಎರಡು ತಾಲೂಕಿನ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿ ಇದರ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೆಶಕ ವಿಶ್ವನಾಥ ಭಟ್, ತಾಲೂಕ ಯುವ ಕಾಂಗ್ರೇಸ್ ಮಾಜಿ ಅಧ್ಯಕ್ಷ ಶ್ರೀಧರ ಹೆಗಡೆ ಹಾಜರಿದ್ದರು.
Muralidhar says
Please Mobile na bada makkaige Kodi