ಹೊನ್ನಾವರ; ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಸೂರಜ್ ನಾಯ್ಕ ಸೋನಿ ಗೆಳೆಯರ ಬಳಗ ಕುಮಟಾ ಇವರ ವತಿಯಿಂದ ಗುರುವಾರ ಪೇಸ್ ಶೀಲ್ಡ್, ಮಾಸ್ಕ್ ಹಾಗೂ ಚತ್ರಿಯನ್ನು ವಿತರಿಸಲಾಯಿತು.ಹೊನ್ನಾವರ ತಾಲೂಕಾ ಆಸ್ಪತ್ರೆ ಮತ್ತು ಸಾಲಕೋಡ. ಕಡತೋಕಾ ಮತ್ತು ಹಳದಿಪುರ ಭಾಗದ ಪ್ರಾಥಮಿಕ ಕೇಂದ್ರದಲ್ಲಿ ಆಯಾ ಭಾಗದ ಆಶಾ ಕಾರ್ಯಕರ್ತೆಯರ ಬಳಿ ತೆರಳಿ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಗೆಳೆಯರೊಂದಿಗೆ ತೆರಳಿ ವಿತರಿಸಿದರು.
ಕೋವಿಡ್ ವಾರಿಯರ್ಸಗೆ ನೆರವಾಗುವ ವಿಷಯವನ್ನು ತಿಳಿದು ಶ್ರೀ ಸಿಗಂದೂರು ದೇವಸ್ಥಾನದ ವತಿಯಿಂದ ಶ್ರೀ ಸಿಗಂಧೂರು ಚೌಡೇಶ್ವರಿ ಭಕ್ತ ವೃಂದ ಹಾಗೂ ಡಾ. ರಾಮಪ್ಪನವರ ಅಭಿಮಾನಿ ಬಳಗದ ಮುಖಾಂತರ ಸಿರೆಗಳನ್ನು ಕಳುಹಿಸಿಕೊಡಲಾಗಿದ್ದು ಅದನ್ನು ಸಹ ಇದೇ ವೇಳೆ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸೂರಜ್ ನಾಯ್ಕ ಮಾತನಾಡಿ ಕರೋನಾ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದು, ಕೋವಿಡ್ ವಿರುದ್ದದ ಹೊರಾಟದಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಆಶಾ ಸಿಬ್ಬಂದಿಗಳು ನಡೆಸಿದ್ದಾರೆ. ಗ್ರಾಮೀಣ ಪಟ್ಟಣ ಕೊರೋನಾ ನಿಯಂತ್ರಣಕ್ಕೆ ಇವರ ಪಾತ್ರ ಪ್ರಮುಖವಾಗಿದೆ.
ಆಶಾ ಕಾರ್ಯಕರ್ತರು ತಮ್ಮ ಜಿವದ ಹಂಗನ್ನು ತೊರೆದು ಪ್ರತಿ ಮನೆ ಮನೆಗೆ ತೆರಳಿ ಕರ್ತವ್ಯ ನಿರ್ವಹಿಸಿದ್ದನ್ನು ಪರಿಗಣಿಸಿ ಅವರ ಸೇವೆಗೆ ಗೌರವಿಸಲು ಇಂದು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು. ಸಿಂಗದೂರು ಕ್ಷೇತ್ರದಿಂದ ಸೀರೆ ಶ್ರೀ ದೇವರ ಪ್ರಸಾದ ರೂಪದಲ್ಲಿ ನೀಡಲಾಗಿದೆ. ನಿಮ್ಮ ಹೋರಾಟಕ್ಕೆ ಮುಂದೆ ನಿಂತು ಬೆಂಬಲ ನೀಡುದಾಗಿ ಭರವಸೆ ನೀಡಿದರು.
ಹೊನ್ನಾವರ ತಾಲೂಕ ಆರೋಗ್ಯ ವೈದ್ಯಾಧಿಕಾರಿ ಡಾ. ಉಷಾ ಹಾಸ್ಯಗಾರ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ ಕಿಣಿ, ಜೆ.ಡಿ.ಎಸ್ ಘಟಕದ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ,ಕುಮಟಾ ಘಟಕದ ಅಧ್ಯಕ್ಷಸಿ.ಜಿ ಹೆಗಡೆ, ಸಿಗಂಧೂರು ಚೌಡಮ್ಮ ಭಕ್ತ ವೃಂದ ಹಾಗೂ ಡಾ. ರಾಮಪ್ಪನವರ ಅಭಿಮಾನಿ ಬಳಗದ ಅಧ್ಯಕ್ಷ ರವಿ ನಾಯ್ಕ, ಹಳದಿಪುರ ಗ್ರಾ.ಪಂ ಅಧ್ಯಕ್ಷ ಅಜಿತ್ ನಾಯ್ಕ, ಸಾಲಕೋಡ ಪಂ. ಉಪಾಧ್ಯಕ್ಷ ಸಚಿನ್ ನಾಯ್ಕ, ಕರವೇ ಅಧ್ಯಕ್ಷ ಮಂಜುನಾಥ ಗೌಡ,ಸುದರ್ಶನ ಶ್ಯಾನಭಾಗ ರಾಘು ನಾಯ್ಕ, ಮತ್ತಿತರರು ಹಾಜರಿದ್ದರು.
Leave a Comment