ಹೊನ್ನವರ್;
ಗುಡ್ಡ ಕುಸಿತದಿಂದ ಬೃಹತ ಗಾತ್ರದ ಬಂಡೆ ಮನೆ ಅಂಗಳಕ್ಕೆ ಬಂದು ಬಿದ್ದ ಘಟನೆ ತಾಲೂಕಿನ ಹಡಿನಬಾಳ ಗ್ರಾಮಪಂಚಾಯತ್ ವ್ಯಾಪ್ತಿಯ ಕಾವೂರಿನ ಗುರುವಾರ ನಡೆದಿದೆ.
ಸುರೇಶ್ ನಾರಾಯಣಗೌಡ ಎಂಬುವರ ಮನೆಯ ಅಂಗಳಕ್ಕೆ ಬಂಡೆ ಉರುಳಿದೆ. ಗುಡ್ಡ ಕುಸಿತಕ್ಕೆ ಕಾವೂರಿನ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಕೂಡ ಕುಸಿದು ಬಿದ್ದಿದೆ. ಕಾರ್ಮಿಕ ಮುಖಂಡ ತಿಲಕ ಗೌಡ ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳ ಗಮನಕ್ಕೆ ತಂದರು. ತಹಶೀಲ್ದಾರ್ ವಿವೇಕ್ ಶೆಣ್ವಿ ಕಂದಾಯ ಇಲಾಖೆಯ ಅಧಿಕಾರಿಗಳು ,ಪಿಡಿಒ, ಗ್ರಾಮಪಂಚಾಯತ ಹಡಿನಬಾಳ ,ಅಗ್ನಿಶಾಮಕ ಶಾಮಕ ಠಾಣಾ ಅಧಿಕಾರಿಗಳು ,ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮದ ಬಗ್ಗೆ ಪರಿಶೀಲಿಸಿದರು.
Leave a Comment