ಹೊನ್ನಾವರ :ತಾಲೂಕಿನಲ್ಲಿ ಕೊರೋನಾ ಸುರಕ್ಷತಾ ಕ್ರಮದ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದೆ. ಪ್ರಥಮ ದಿನ ೧೯೮೦ ವಿದ್ಯಾರ್ಥಿಗಳು ಪರಿಕ್ಷೆ ಬರೆದಿದ್ದಾರೆ. ಈ ಬಾರಿ ಆರು ವಿಷಯಗಳ ಪರೀಕ್ಷೆಯನ್ನು ಎರಡು ದಿನಗಳಿಗೆ ಇಳಿಸಿ ಪರೀಕ್ಷೆ ನಡೆಸಲಾಗುತ್ತಿದ್ದು, ಸೋಮವಾರ ಮೊದಲ ದಿನ ಗಣಿತ, ವಿಜ್ಞಾನ , ಹಾಗೂ ಸಮಾಜ ವಿಜ್ಞಾನಪರೀಕ್ಷೆ ನಡೆದಿದೆ.
ಮೂರು ವಿಷಯಗಳಿಗೆ ೧೨೦ ಅಂಕಗಳ ಪರೀಕ್ಷೆ ಇದಾಗಿದೆ. ತಾಲೂಕಿನಲ್ಲಿ ೧೫ ಪರಿಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಒಂದು ಪರೀಕ್ಷಾ ಕೊಠಡಿಯಲ್ಲಿ೧೨ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.ಪರೀಕ್ಷೆ ಬೆಳಗ್ಗೆ ೧೦.೩೦ರಿಂದ ೧.೩೦ ರವರೆಗೆ ನಡೆದಿದ್ದು ಇದರಲ್ಲಿ ೧೦೦೬ ಬಾಲಕರು, ೯೭೪ ಬಾಲಕಿಯರು ಪರೀಕ್ಷೆ ಬರೆದಿದ್ದಾರೆ.
ಹೊರ ತಾಲೂಕು ಹೊರ ಜಿಲ್ಲೆಯ ೧೭ ವಿದ್ಯಾರ್ಥಿಗಳಿದ್ದಾರೆ. ಈ ಬಾರಿ ಪರೀಕ್ಷಾ ಕೇಂದ್ರ ವಿದ್ಯಾರ್ಥಿಗಳಿಗೆ ಅನೂಕೂಲವಾಗಲು ಅಧ್ಯಯನ ನಡೆಸಿದ ಶಾಲೆಯ ಸನಿಹವೇ ನೀಡಿದ್ದು, ಕೊರೋನಾ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಪ್ರತಿಯೊರ್ವರಿಗೂ ಮಾಸ್ಕ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿದೆ.
ಪರೀಕ್ಷೇ ಆರಂಭಕ್ಕೆ ಮೊದಲು ಹಾಗೂ ನಂತರ ಕೊಠಡಿ ಹಾಗೂ ಪರೀಕ್ಷಾ ಕೇಂದ್ರದ ಸುತ್ತಲೂ ಸ್ಯಾನಿಟೈಜರ್ ಮಾಡಲಾಗುತ್ತಿದೆ. ೬ ಮಾರ್ಗದಲ್ಲಿ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳನ್ನು ಕರೆತರಲು ಕೆ.ಎಸ್.ಆರ್.ಟಿ.ಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಸವಿತಾ ನಾಯ್ಕ ಮಾಹಿತಿ ನೀಡಿದರು.
Leave a Comment