ಕಾರವಾರ : ಕುಮಟಾ ಪುರಸಭೆ ವತಿಯಿಂದ 2021-22ನೇ ಸಾಲಿನಲ್ಲಿ ಡೇ ನಲ್ಮ ಯೋಜನೆಯಲ್ಲಿ ಸ್ವಯಂ ಉದ್ಯೋಗ ಘಟಕದಡಿ ಪುರಸಭಾ ವ್ಯಾಪ್ತಿಯ ಬಿಪಿಎಲ್ ಕುಟುಂಬದವರಿAದ ಸ್ವಂತ ಉದ್ದಿಮೆಗಾಗಿ ಸಾಲ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಶೇ. 7 ಕ್ಕಿಂತ ಮೇಲ್ಪಟ್ಟ ಬಡ್ಡಿಗೆ ಸಹಾಯಧನದೊಂದಿಗೆ ಬ್ಯಾಂಕ್ನ ಮೂಲಕ ಸಾಲ ನೀಡಲಾಗುತ್ತಿದ್ದು. ಸಾಲ ಪಡೆಯಲು ಇಚ್ಛಸುವರು ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, 2 ಭಾವ ಚಿತ್ರಗಳು, ಬ್ಯಾಂಕ್ ಪಾಸ್ಬುಕ್ ಝೆರಾಕ್ಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ವಯಸ್ಸಿನ ದಾಖಲಾತಿಯೊಂದಿಗೆ ದ್ವಿಪ್ರತಿಯಲ್ಲಿ ಅಗಸ್ಟ್ 8 ರೊಳಗೆ ಪುರಸಭಾ ಕಚೇರಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಡೇ-ನಲ್ಮ ವಿಭಾಗದ ವಿಷಯ ವಿರ್ವಾಹಕರನ್ನು ಸಂಪರ್ಕಿಸಬಹುದು ಎಂದು ಕುಮಟಾ ಪುರಸಭೆ ,ಉಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment